ಉಪ್ಪಲಗಿರಿ ಸಂಗಮನಾಥ

ಉಪ್ಪಲಗಿರಿ ಸಂಗಮನಾಥ

ಹನ್ನೆರಡನೆಯ ಶತಮಾನ ಜ್ಞಾನದಬೆಳಕು  ಮೂಡಿಸಿದ ಪರ್ವಕಾಲ‌. ಇತಿಹಾಸದಲ್ಲಿ ಎಂದೆಂದು ಮೆರೆಯುವ ಶತಮಾನವದು. ಕಲ್ಯಾಣ ಶರಣರಿಗೆ ಗುರು ಜಂಗಮ ಮೂರ್ತಿಯಾದ ಸಂಗಮೇಶ್ವರ ಉಪ್ಪಲಗಿರಿಯನ್ನು 
ನಡುನಾಡ ಶ್ರೀಶೈಲ ವನ್ನಾಗಿ ಪರಿವರ್ತಿಸಿದರು.
             ಬೀದರ ಜಿಲ್ಲೆ ಬಸವಕಲ್ಯಾಣದ ಶಿವಪುರದಲ್ಲಿ  ಜನಿಸಿದ ಸಂಗಮೇಶ್ವರ ಚಿಕ್ಕಂದಿನಿಂದ ಪುರಾಣಹಳೆಂದರೆ ಅಪಾರ ಶೃದ್ಧೆ ಆಸಕ್ತಿ. ಪುರಾಣಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ  ಮಹಿಮೆ ಆಲಿಸಿ ತಾನು ಶ್ರೀಶೈಲಕ್ಕೆ ತೆರಳಬೇಕೆಂದು ಹಠಹಿಡಿದು ಕೊನೆಗೆ ಮಲ್ಲಿನಾಥನ ದರ್ಶನ ಪಡೆದರು. 
            ಕಲ್ಯಾಣ ದಲ್ಲಿ ಶರಣರಿಗೆ ಗುರುಲಿಂಗಜಂಗಮ ಮೂರ್ತಿಯಾಗಿ.‌ ಮಾರ್ಗದರ್ಶನ ನೀಡುತ್ತ ಅಂಧ ಶೃದ್ಧೆ, ಮೂಡನಂಬಿಕೆ, ಮೇಲುಕೀಳು ಹಾಗೂ ಅನಿಷ್ಠ ಪದ್ಧತಿಗಳ ವಿರುದ್ದ ದ್ವನಿ ಎತ್ತಿದರು. ನಂತರ ನಾಡಿನೂದ್ದಕ್ಕೂ ಸಂಚರಿಸಿ ಮಾನವರಿಗೆ ಜಾಗ್ರತೆ ಮೂಡಿಸಿದರು. 
        ಉಪ್ಪಲಗಿರಿಯ ಪೂರ್ವದಲ್ಲಿರೊ ಗದ್ದುಗೆಪುರ ತಮ್ಮ ಕರ್ಮಭುಮಿ ಯಾಗಿಸಿಕೊಂಡು ಕಾಯಕ ಸಿದ್ದಂತ ವಿವರಿಸಿದರು. ಯುಗಾದಿ ವೇಳೆ ಜನರು ಪಾದಯಾತ್ರೆ ಮೂಲಕ ಶ್ರೀಶೈಲ ಕ್ಕೆ ತಲಿಪುತ್ತಾರೆ.. ಶರಣ ಸಂಗಮೇಶ ಸುರಂಗಮಾರ್ಗವಾಗಿ ಹೋದನೆಂದು ಹೇಳಲಾಗಿದೆ. ಶ್ರೀಶೈಲವನ್ನು ಉಪ್ಪಲಗಿರಿಗೆ ಹೊತ್ತತಂದು ದೇವಾಲಯಗಳ ನಾಡು ಮಾಡಿದರು. ಅಲ್ಲಿನ ಸಕಲ ತೀರ್ಥ ಲಿಂಗಗಳು ಉಪ್ಪಲದಿನ್ನಿ ಯಲ್ಲಿ ಸ್ಥಾಪಿಸಿದರು.
ಈ ನಡುನಾಡನ್ನು  ಶ್ರೀಶೈಲ ವನ್ನಾಗಿ ನಿರ್ಮಿಸಿದರು. ವಿಜಯಪುರ ಜಿಲ್ಲೆಯಲ್ಲಿರುವ ಈ ಉಪ್ಪಲಗಿರಿ ಒಂದು ದೊಡ್ಡ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ವಾಗಿದೆ. ಇಲ್ಲಿ ಸಂಗಮನಾಥರು ಪ್ರತಿಷ್ಠಾಪಿಸಿದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಅಟಕೇಶ್ವರ, ಶಿಖರೇಶ್ವರ, ಬ್ಯಾಳಿ ಬಸವಣ್ಣ, ನಂದಿಕೇಶ್ವರ ಸೇರಿದಂತೆ ಹಲವಾರು ದೇವಾಲಯದ ಇಲ್ಲಿವೆ.
   ಪಾತಾಳಗಂಗೆ, ಕಾಶೀತೀರ್ಥ ರಾಮೇಶ್ವರ ತೀರ್ಥ ದಂತ ಹಲವಾರು ತೀರ್ಥಗಳಿವೆ. 
    ಆಕಾಶ ತಿಮಶೆಟ್ಟಿ ಕಾಖಂಡಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ