ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುಡ್ಡಾಪುರ ಶ್ರೀ ದಾನಮ್ಮ ದೇವಿ

ಇಮೇಜ್
ವಿಶ್ವದಲ್ಲಿ ಶಾಂತಿ ಅಶಾಂತಿಗಳ ಧರ್ಮ ಅಧರ್ಮ ಸಂಘರ್ಷ ನಡೆದಾಗ ಸುಳ್ಳು ಸತ್ಯದ ಮೇಲೆ ಮೆರೆದಾಡುತ್ತಿರುವಾಗ ಮನುಕುಲದ ಉದ್ದಾರಕ್ಕಾಗಿ ಧರೆಗೆ ಅವತರಿಸಿ ಸಾದಾರಣ ಜೀವನದಲ್ಲಿ ಸುದಾರಣೆ ತಂದು ನಾಡಿನ ಜನರ ಅಜ್ಞಾನ ಅಳಿಸಿ ಸುಜ್ಞಾನ ತೋರಿದ ಮಹಾನ್ ಶರಣ ಸಂತ ಮಹಾ ತಪಸ್ವಿಗಳ ನಾಡು ನಮ್ಮದು. ಇವರ ಸಾಲಿನಲ್ಲಿ ಬರುವ 12 ನೇ ಶತಮಾನದ ಶ್ರೀ ದಾನಮ್ಮದೇವಿ ತಮ್ಮ ದಾನ ಧರ್ಮ ದಿಂದ  ಕೋಟ್ಯಂತರ ಜನರ ಅಮ್ಮನಾಗಿ ಗುಡ್ಡಾಪುರದಲ್ಲಿ ನೆಲೆಸಿದ್ದಾರೆ.        ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಪಂಚಾಳ ಮನೆತನದ ಶ್ರೀ ವೀರಭದ್ರನ ಪರಮ ಭಕ್ತರಾದ ಅನಂತರಾಯ ಮತ್ತು ಶಿರಸಮ್ಮ ದಂಪತಿಗೆ ಬಹಾಲ ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಕೊರಗೂ ಇರುತ್ತದೆ. ದಂಪತಿಗಳು ವೀರಭದ್ರನನ್ನು ಬೆಡಿಕೊಳ್ಳಲಾಗಿ ಸ್ವಪ್ನದಲ್ಲಿ ಬಂದು ಆಶೀರ್ವಾದ ಮಾಡಿದ ನವಮಾಸ ಕಳೆದ ನಂತರ ಶಿರಸಮ್ಮ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನಲ್ಲಿನ ಅಮೋಘ ಪ್ರಜ್ವಲತೆ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ.   ಮಗು ಹಾಲು ಕುಡಿಯದಾದಾಗ ಒಂದು ಚಿಂತೆ ಶುರುವಾಗಿ ಬಿಡುತ್ತದೆ. ಜಂಗಮರ ಆದೇಶದಂತೆ ಜನನದಿಂದ ಹದಿಮೂರನೇ ದಿನಕ್ಕೆ ಮಂಗಲ ಗೀತೆ ಹಾಡುತ್ತ ಲಿಂಗದಾರಣೆ ಮಾಡುತ್ತಿದ್ದಂತೆ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಎಲ್ಲರೂ ಸೇರಿ ಮಗುವಿಗೆ ಲಿಂಗಮ್ಮ ಎಂದು ನಾಮಕರಣ ಮಾಡುತ್ತಾರೆ. ತಂದೆ    ತಾಯಿಯರ ಲಿಂಗಪೂಜೆ ಶಿವಶರಣರ ಕಥೆ ಕೇಳಿ ಪ್ರೇತಿತಲಾದ ಲಿಂಗಮ್ಮ ಕಲ್ಯಾಣದಲ್ಲಿರ

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಇಮೇಜ್
ಚಿತ್ರ: ಮಲ್ಲಿಕಾರ್ಜುನ  ಸ್ವಾಮೀಜಿ ಚಿತ್ರ : ಜ್ಞಾನಯೋಗಾಶ್ರಮದ ಪ್ರಣವಮಂಟಪ ಪ್ರವಚನ ಮೂಲಕ ಜನರನ್ನು ಪರಿವರ್ತಿಸಿದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ 🙏🙏    ಅಜ್ಞಾನ ಅಳಿಸಿ ಸುಜ್ಞಾನದೆಡೆಗೆ ಕೊಂಡೊಯ್ಯುವ ಗುರುಗಳನ್ನು ನೆನೆಯುವ ಪರ್ವದಿನವೇ ಗುರುಪೌರ್ಣಿಮೆ. ಇದು ಎಲ್ಲ ಧರ್ಮದವರಿಗೂ ಪವಿತ್ರ.  ಅಂತೆಯೇ ಪ್ರವಚನಗಳ ಮೂಲಕ ಭಕ್ತರ ಅಂಧಕಾರ ನೀಗಿಸಿ ಸುಜ್ಞಾನದೆಡೆಗೆ ದಾರಿ ತೋರಿದ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು  ಗುರುಪೌರ್ಣಿಮೆಯಂದು ಆರಾಧಿಸಲಾಗುತ್ತಿದೆ.  ⛳ಮನುಕುಲದ ಉದ್ಧಾರಕ:- ಯುಗಪುರುಷ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಬಾಲ್ಯದ ಹೆಸರು ಮುದುಕಪ್ಪ. ಇವರು 1903 ಅಗಸ್ಟ 15ರಂದು ಸವದತ್ತಿ ತಾಲೂಕಿನ ಹಂಚಿನಾಳದ ಚನ್ನವೀರಪ್ಪ ಮತ್ತು ನೀಲಮ್ಮ ದಂಪತಿಯ ಪವಿತ್ರ ಗರ್ಭದಲ್ಲಿ ಜನಿಸಿದರು. ತಾಯಿಯಿಂದ ಅಕ್ಷರಾಭ್ಯಾಸ ಮಾಡಿದ ಮುದುಕಪ್ಪ ಉತ್ತಮ ಕಂಠಸಿರಿ ಹೊಂದಿದ್ದರು. ಭಕ್ತಪ್ರಲ್ಹಾದ, ಶ್ರವಣಕುಮಾರ ಮತ್ತು ಅನೇಕ ಭಕ್ತಿ ಪ್ರಧಾನ ನಾಟಕಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದರು.       ಇವರ ಕಂಚಿನ ಕಂಠಕ್ಕೆ ತಲೆದೂಗಿದ ಗದುಗಿನ ಶಿವಾನಂದರು ತಮ್ಮ ಜ್ಞಾನ ಪ್ರಸಾರ ಕಾರ್ಯಕ್ಕೆ ಸೇರಿಸಿಕೊಂಡರು. ಮುದುಕಪ್ಪನಿಗೆ 1924ರಲ್ಲಿ ದೀಕ್ಷೆ ನೀಡಿದರು. ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳು ಮೀರಜನ  ಕಲ್ಲಪ್ಪ ಜಕಾತೆ ಅವರ ಮನೆಯಲ್ಲಿ ನಿಜಗುಣ ಶಾಸ್ತ್ರ ಪ್ರವ

ವಚನ ಪಿತಾಮಹ ರಾವ್ ಬಹದ್ದೂರ್ ಡಾ|| ಫಕೀರಪ್ಪ ಗುರಬಸಪ್ಪ ಹಳಕಟ್ಟಿ

ಇಮೇಜ್
                 ಕೆರೆಯನ್ನು ಕಟ್ಟಿಸಿ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲೆ ಕಾಲೇಜು ತೆರೆಸಿ, ಜನರ ಉದ್ದಾರಗೈದ ಮಹಾಪುರುಷ ಶ್ರೀ ಫ ಗು ಹಳಕಟ್ಟಿಯವರು, ಹಾಳಾಗುತ್ತಿದ್ದ ೧೨ನೇ ಶತಮಾನದ ಬಸವಾದಿ ಶರಣರ ವಚನಗಳ ತಾಳೆಗರಿಗಳನ್ನು ಸಂಗ್ರಹಿಸಿ ರಕ್ಷಿಸಿದ ಶರಣ ಸರಳ ಜೀವಿ ಅಧುನಿಕ ವಿಜಯಪುರದ ನಿರ್ಮಾತೃ. ಪ್ರತಿವರ್ಷ ಜುಲೈ ೨ ರಂದು ಹಳಕಟ್ಟಿಯವರ ಜನ್ಮ ದಿನಾಚರಣೆಯನ್ನು ವಿಜಯಪುರದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಚರಿಸುತ್ತ ಬಂದಿವೆ.           ಕನ್ನಡದ ಕಣ್ವ ಬಿಎಂಶ್ರೀ ವಿಜಯಪುರಕ್ಕೆ ಬಂದಾಗ ಸ್ಥಳೀಯ ಸಾಹಿತಿಯೊಬ್ಬರು ಗೋಳಗುಮ್ಮಟ ನೋಡಲು ಕರೆದುಕೊಂಡು ಹೋರಟರು. ಆದರೆ ಬಿಎಂಶ್ರೀ ಮೊದಲು ನನ್ನನ್ನು ವಚನ ಗುಮ್ಮಟಕ್ಕೆ ಕರೆದೊಯ್ಯಿರಿ ಎಂದರು. ಜುಲೈ 2 ವಚನಗುಮ್ಮಟ ವಚನ ಪಿತಾಮಹ ರಾವ್ ಬಹದ್ದೂರ ಡಾ|| ಫ.ಗು.ಹಳಕಟ್ಟಿ ಯವರ 139ನೇ ಜನ್ಮದಿನ.        ಫಕೀರಪ್ಪ ಗುರಬಸಪ್ಪ ಹಳಕಟ್ಟಿಯವರು ಶರಣ ದಂಪತಿಗಾಳಾದ ದಾನಮ್ಮ ಮತ್ತು ಗುರಬಸಪ್ಪನವರ ಮಗನಾಗಿ 1880 ರ ಜುಲೈ 2 ರಂದು ಜನಿಸಿದರು. ‌ತಂದೆ ಗುರಬಸಪ್ಪ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ತನ್ನ ಬಾಲ್ಯವನ್ನು ಮುಗಿಸಿ ಮೆಟ್ರಿಕ್ ಶಿಕ್ಷಣವನ್ನು 1896ರಲ್ಲಿ ಮುಗಿಸಿ ಮುಂಬೈ ಸೇಂಟ್ ಝೇವಿಯರ್ ಕಾಲೇಜ ಸೇರಿ 1901ರಲ್ಲಿ ಬಿಎಸ್.ಸಿ ಪಾಸಾಗಿ 1904 ರಲ್ಲಿ ಎಲ್ ಎಲ್ ಬಿ ಪದವಿ ಪಡೆಯುತ್ತಾರೆ.       ಬೆಳಗಾವಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಮುಂದೆ ವಿಜಯಪುರವನ

ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಕಲಾಶ್ರೀಮಂತಿಕೆ ಕಲರವ

ಇಮೇಜ್
ಕ್ಯಾಂಪಸ್ ತುಂಬ ದೋತಿ, ರುಮಾಲು, ಪಂಚೆ, ಪೇಟ ಧರಿಸಿದ ಹುಡುಗರು. ಬಣ್ಣ ಬಣ್ಣದ ಸೀರೆ ತೊಟ್ಟು ಚಿತ್ತಾರ ಬಿಡಿಸಿದ ಹುಡುಗಿಯರು. ಒಂದೆಡೆ ತಂತ್ರಜ್ಞಾನಕ್ಕೆ ಸಂಬಂದಿಸಿದ ಆಟಗಳು ನಡೆದರೆ ಮತ್ತೊಂದೆಡೆ ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಹಳ್ಳಿ ಸೊಗಡಿನ ವೈಭವ ಅನಾವರಣ ಗೊಂಡಿತ್ತು ಇದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಡಾ|| ಫ.ಗು. ಹಳಕಟ್ಟಿ ಅಭಿಯಂತರರ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನ ನಡೆದ ಇನ್ವಿಕ್ಟಸ್2017 ರ ಚಿತ್ರಣ.            ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ "ಕಲಾ ಕಾರ್ನರ್" ಎಲ್ಲರ ಗಮನ ಸೆಳೆಯುತ್ತಿತ್ತು. ಮೇವು ತುಂಬಿದ ಎತ್ತಿನ‌ಬಂಡಿ ಮತ್ತು ಸೈಕಲ್ ಪ್ರವೇಶ ದ್ವಾರದಲ್ಲೆ ನೋಡುಗರನ್ನು ಸ್ವಾಗತಿಸುತ್ತಿದ್ದವು. ಕಲಾ ಕಾರ್ನರ್ ಆಯೋಜಕರು ಮಣ್ಣಿನ‌ ಮಕ್ಕಳಂತೆ ದೊತಿ ರುಮಾಲು, ಇಲಕಲ್ ಸೀರೆ ತೊಟ್ಟು ಪ್ರೇಕ್ಷರಿಗೆ ಕಲಾಕೃತಿಗಳ ಮಾಹಿತಿ ನೀಡುತ್ತಿದ್ದರು.              ಕಲಾ ಕಾರ್ನರ್ ನಲ್ಲಿ ಪ್ರದರ್ಶಿಸಕ್ಕಿಡಲಾದ ಚಿತ್ರಗಳು ಜಾತ್ರೆ  ದೇವಸ್ಥಾನ ರೈತರು ಜಾನುವಾರು ಮಹಿಳೆಯರು ಮತ್ತು ಬುದ್ದ ಮಹಾವೀರರಂಥ ಮಹಾನ್ ವ್ಯಕ್ತಿಗಳ ತೈಲ‌ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೊಮ್ಮಗನ‌‌ ಮೇಲಿನ‌ ಅಜ್ಜನ ‌ಮಮಕಾರ, ರೈತ ಜಾನುವಾರುಗಳ ನಡುವಿನ ಸಂಬಂಧ, ಪಾರಿವಾಳದಿಂದ ಇಂದಿನ ಮೊಬೈಲ್ ವರೆಗಿನ ಸಂಪರ್ಕ ಮಾದ್ಯಮಗಳು, ಅಂತರಂಗ ಶುದ್ದಿಯ ಉತ್ತಮ ಸಂದೇಶ ಸಾರುವ ಸುಮಾರು 70ಕ್

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಇಮೇಜ್
ಶಿವ ಶಿವೋ‌ ಹಾಲ ಮಲ್ಲಯ್ಯ ಓಲಮಲ್ಲಯ್ಯ ಸಕ್ಕರಿ ಸವಿಗಾರ ಮಲ್ಲಯ್ಯ ಮಹಾಂತ ಮಲ್ಲಯ್ಯ ಉಘೇ ಹಾಲಗಿರಿ ಮೇಲಗಿರಿ ಸಿದ್ದಗಿರಿ ಸಿಂಹಾಸನಗಿರಿ ಶ್ರೀ ಪಾದಕೆ ಮಹಾಂತ ಮಲ್ಲಯ್ಯ ಉಘೇ ಪಾತಾಳಗಂಗೆ ಜ್ಯೋತಿರ್ಲಿಂಗ ಶ್ರೀ ಪಾದಕೆ ಮಹಾಂತ ಮಲ್ಲಯ್ಯ ಉಘೇ ಬಂಗಾರ ಗುಡಿ ಬೋಳಮಲ್ಲಿಕಾರ್ಜುನ ಶ್ರೀ ಮಹಾಂತ ಮಲ್ಲಯ್ಯ ಉಘೇ   ಹೀಗೆ ಶ್ರೀಶೈಲ ಮಲ್ಲಿಕಾರ್ಜುನನ್ನು ನೆನೆಯುತ್ತ ಬೆಟ್ಟದ ಕಲ್ಲು ಮುಳ್ಳುಗಳ ಹಾದಿಯಲ್ಲಿ ಭಕ್ತರು ಹೆಜ್ಜೆಹಾಕುತ್ತಾರೆ. ಯುಗಾದಿ ಹಬ್ಬದಂದು ನಡೆಯುವ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ.       ಇದೀಗ ಕಂಬಿ ಮಲ್ಲಯ್ಯ ಊರಿನ ಎಲ್ಲೆಡೆ ಮನೆ ಮನೆಗೆ ತೆರಳಿ ದರ್ಶನ ನೀಡುತ್ತಿದ್ದಾನೆ.  ಕಂಬಿ ಒಂದು ಬಿದಿರಿನ‌ ಸಾದನ ಅದಕ್ಕೆ ಮುಂಬದಿ ನಂದಿ ಮತ್ತು ಶಿವಲಿಂಗವನ್ನು ಇರಿಸಿ ಹೊದಿಕೆ ಹೊದಿಸಿ ಪೂಜ್ಯಭಾವದಿಂದ ವಿಶೇಷ ವಿನ್ಯಾಸ ಹೊಂದಿರುತ್ತದೆ. ಭಕ್ತರು ಈ ಕಂಬಿಯನ್ನು ಮಲ್ಲಯ್ಯ ಎಂದು ತಮ್ಮೊಡನೆ ಶ್ರೀಶೈಲದ ಹಾದಿಯುದ್ದಕ್ಕೂ ಒಯ್ಯುತ್ತಾರೆ . ಕಂಬಿ ಪದಗಳನ್ನು ಹಾಡುತ್ತಾ ಶಿವಬಜನೆ ಮಾಡುತ್ತಾ ಶ್ರೀಶೈಲ ತಲುಪುತ್ತಾರೆ. ಹಿರಿಯರು ಹೇಳುವ ಪ್ರಕಾರ  ಕಂಬಿ ಒಂದು ಬಿರಿರಿನಿಂದ ಮಾಡಿದ ಸಾದನ, ಶ್ರೀಶೈಲದತ್ತ ಪಯಣ ಬೇಳೆಸುವಾಗ ಬಿದಿರಿನ ಒಂದು ಭಾಗಕ್ಕೆ ಆಕಾರದ ಜೋಳಿಗೆ, ಮತ್ತೊಂದು ಬದಿಗೆ ನೀರನ್ನು ಹಾಕಿ ಒಯ್ಯುತ್ತಿದ್ದರು. ಪ್ರಯಾಣಿಕರಿಗೆ ಇದು ಅತೀ ಉಪಯುಕ್ತ ಮತ್ತು ಅನೂಕೂಲಕರವಾದ್ದರಿಂದ ಅದ

ನವರಸಪುರಕ್ಕೆ ಒಂಬತ್ತರ ನಂಟು: ಶಾಹಿ ಸಾಮ್ರಾಜ್ಯದ ಸಂಗೀತ ಸಾಹಿತ್ಯಕ್ಕೆ‌ ಸಾಕ್ಷಿ ಸಂಗೀತ ಮಹಲ

ಇಮೇಜ್
         ಐತಿಹಾಸಿಕ ನಗರ ವಿಜಯಪುರದಿಂದ 6ಕೀಮಿ ದೂರದಲ್ಲಿರುವ ನವರಸಪುರ ಆದಿಲ್‌ಶಾಹಿ ಸಾಮ್ರಾಜ್ಯದ ಸಾಹಿತ್ಯ ಮತ್ತು ಸಂಗೀತ ಪ್ರೀತಿ, ಮತ್ತು ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ. ಅಂದಿನ ಆದಿಲ್ ಶಾಹಿ ಅರಸರು ನಿರ್ಮಾಣ ಮಾಡಿದ ಅದ್ಬುತ ಕಟ್ಟಡಗಳಲ್ಲಿ ಒಂದಾದ ಗೋಲಗುಂಬಜ್, ಇಬ್ರಾಹಿಮ್ ರೊಜ, ಬಾರಾಕಮಾನ ಮತ್ತು ನಗರದೆಲ್ಲೆಡೆ ಇರುವ ಮಹಲು ಕೋಟೆ ಕಂದಕ ಕಮಾನು ಬಾವಿ ಗಂಜಗಳು ಪ್ರತಿಯೋಂದು ತಮ್ಮ ಐತಿಹಾಸಿಕ ಕಥೆ ಹೇಳುತ್ತವೆ.           ಈ ಸ್ಮಾರಕ ಗಳಲ್ಲಿ ಒಂದಾದ ನವರಸಪುರದ ಸಂಗೀತ-ನಾರಿ ಮಹಲ ಇಲ್ಲಿನ ಪ್ರಮುಖ ಆಕರ್ಷಣೆ ತಾಣ. ಸಂಗೀತ ಮಹಲ ಇಬ್ರಾಹಿಮ್ ಎರಡನೇ ಆದಿಲ್ ಷಾ ತನ್ನ ಸಂಗೀತ ಬಗೆಗಿನ ಪ್ರಿತಿ ಬಿಂಬಿಸುತ್ತದೆ. ತನ್ನ ಆಡಳಿತಾವಧಿಯಲ್ಲಿ ಈ ಮಹಲು ನಿರ್ಮಿಸಿ ಅನೇಕ ಸಂಗೀತ ವಿದ್ವಾಂಸರಿಗೆ ಆಸರೆಯಾಗಿದ್ದರು.           ರಾಜರುಗಳು ಸ್ವತಃ ಕಲಾವಿದರು . ಶಾಹಿ ಸಾಮ್ರಾಜ್ಯದ ಅನೇಕ ರಾಜರು ಸಂಗೀತ ವಿದ್ವರಾಗಿದ್ದರು. ಸಂಗೀತನ್ನು ಪ್ರೀತಿಸಿ ಗೌರವಿಸುವ ಇವರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪ್ರವೀಣರು. ಯೂಸುಪ್ ಆದಿಲ್ ಷಾ ಮಾತ್ತು ಎರಡನೇ ಆದಿಲ್ ಷಾ ತಬಲಾ, ಗಿಟಾರ್, ಸಿತಾರ, ವೀಣಾ, ಮತ್ತು ಅನೇಕ ವಾದ್ಯಗಳನ್ನು ನುಡಿಸುತ್ತಿದ್ದರು.             ಸಂಗೀತ ವಿದ್ವಾಂಸರ ಸಮಾಗಮಕ್ಕೆ ಸೂಕ್ತ ವೇದಿಕೆ ಸಂಗೀತ ಮಹಲ:-            ಬೃಹದ್ದಾಕಾರದ ವೇದಿಕೆ ಅದರ ಮುಂದೆ ನೀರಿನ‌ಹೊಂಡ ಸುತ್ತಲು ರಕ್ಷಣೆಗೆ ಗೊಡೆ ಎಲ್ಲದಿಕ್ಕಿಗೂ ಮಹಾದ್ವಾರ
ಇಮೇಜ್
¤¸ÀUÀð ¥ÉæëÄUÀ½UÉ ¸ÀéUÀð, ¨sÀQÛAiÀÄ PÉÃAzÀæ ©AzÀÄ ¸ÀAUÀªÀÄ PÉëÃvÀæzÀ §¸ÀªÉñÀégÀgÀ ¨Á®å £É£À¦¸ÀĪÀ ©Ã¼ÀV vÁ®ÆQ£À aPÀ̸ÀAUÀªÀÄ. GvÀÛgÀ PÀ£ÁðlPÀzÀ fêÀ£À¢ PÀȵÉÚ ªÀĺÁgÁµÀÖçzÀ°è ºÀÄnÖ PÀ£ÁðlPÀzÀ°è ºÀjzÀÄ DAzÀæ¥ÀæzÉñÀPÀÆÌ vÀ£Àß PÉÊZÁa ªÀÄÄAzÉ ¸ÀªÀÄÄzÀæ ¸ÉÃgÀÄvÁÛ¼É. F £ÀqÀÄªÉ ºÀvÀÛPÀÆÌ ºÉZÀÄÑ G¥À£À¢UÀ¼ÀÆ PÀȵÉÚAiÀÄ°è PÀÆrPÉÆAqÀÄ ¸ÀAUÀªÀÄ PÉëÃvÀæªÁVªÉ. ¨sÁgÀwÃAiÀÄ ¥ÀgÀA¥ÀgÉAiÀÄ°è £À¢UÀ½UÉ CvÀåAvÀ UËgÀªÀ ¸ÁÜ£À EzÉ ¸ÀAUÀªÀÄ PÉëÃvÀæUÀ¼À°è C¥ÁgÀ ¨sÀQÛ £ÀA©PÉ EzÉ, ¸ÀAUÀªÀÄPÉëÃvÀæzÀ°è £É¯É¤AvÀ ¸Áé«ÄAiÀÄ£ÀÄß ¸ÀAUÀªÀÄ£ÁxÀ JAzÀÄ DgÁ¢¸ÀĪÀÅzÀÄAlÄ. ¨ÁUÀ®PÉÆÃmÉAiÀÄ ºÀÄ£ÀUÀÄAzÀ vÁ®ÆQ£À PÀÆqÀ® ¸ÀAUÀªÀÄ PÀȵÁÚ WÀl¥Àæ¨sÉ ªÀÄ®¥Àæ¨sÉAiÀÄgÀ ¸ÀAUÀªÀĸÁÜ£À ªÁVzÀÄÝ ¸ÀAUÀªÀÄ£ÁxÀ£À ªÀÄÆwð EzÉ.  12£Éà ±ÀvÀªÀiÁ£ÀzÀ ±ÀgÀt dUÀeÉÆåÃw §¸ÀªÉñÀégÀgÀ, vÀ¥ÉÆèsÀÆ«Ä ªÀÄvÀÄÛ LPÀå ¸ÀܼÀªÁzÀ PÀÆqÀ® ¸ÀAUÀªÀÄ ¨sÁgÀvÀzÀ zÁ«ÄÃPÀ PÉëÃvÀæUÀ¼À°è vÀ£ÀߣÀÄß UÀÄgÀÄw¹PÉÆArzÉ.     E¢ÃUÀ PÀȵÉÚ ªÀÄvÀÄÛ WÀl¥Àæ¨sÉ £À¢UÀ¼À ¸ÀAUÀªÀÄ PÉëÃvÀæªÁzÀ ¨ÁUÀ®PÉÆÃmÉ f¯Éè ©Ã¼ÀV vÁ®ÆQ£À aPÀÌ ¸ÀAUÀªÀÄ ¨sÀPÀÛgÀ£ÀÄß ªÀÄvÀÄÛ ¥Àj¸ÀgÀ ¥ÉæëÄUÀ¼À£ÀÄß v