ಧರ್ಮ ದೀಕ್ಷೆಯೊಂದಿಗೆ ರಾಷ್ಟ್ರ ದೀಕ್ಷೇ ನೀಡಿದ ಬಂಥನಾಳ ಶಿವಯೋಗಿಗಳು

"ದೇವರು ಗುಡಿಗಳಲ್ಲಿಲ್ಲ ಶಾಲಾ ಕಾಲೇಜು ಗಳಲ್ಲಿ ಇದ್ದಾನೆ" ಮಕ್ಕಳಿಗೆ ವಿದ್ಯೆ ನೀಡಿ ಬೆಳೆಸಿ ಎಂದು ಶ್ರೀ ಬಂಥನಾಳ ಶಿವಯೋಗಿಗಳು ಕರೆ ನೀಡಿದ್ದಾರೆ. ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರ ಜಿಲ್ಲೆಯಲ್ಲಿ ಇಂದು‌ಹಲವಾರು ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜು ತಲೆ ಎತ್ತಲು ಕಾರಣ  ಅವರು ಅಂದು ಕೊಟ್ಟ ಸ್ಪೂರ್ತಿಯ ಕರೆ. ಶೈಕ್ಷಣಿಕ ಕ್ರಾಂತಿ ಮಾಡಿ ಮಠಗಳ ‌ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ಅಣಿಯಾದ ಧೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನವಸವ ಶಿವಯೋಗಿಗಳು.
              ವೃಷವಲಿಂಗ ಸ್ವಾಮಿಗಳಿಂದ ಸ್ಥಾಪಿತವಾದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಶ್ರೀಮಠವು ಧಾರ್ಮಿಕ ಮತ್ತು ರಾಷ್ಟ್ರಧರ್ಮದ ಕಾರ್ಯಗಳಿಂದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀಮಠ ಪೀಠಾಧಿಪತಿಗಳಾದ ಶ್ರೀ ಸಂಗನಬಸವ ಸ್ವಾಮೀಜಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು.
            ಬಸವನ ಬಾಗೇವಾಡಿ ತಾಲೂಕಿನ ಮಸೂತಿ ಗ್ರಾಮದಲ್ಲಿ ಶರಣ ದಂಪತಿಗಳಾದ ಗೌರಾಂಬೆ ಮತ್ತು ಪರುತಯ್ಯ ನವರ ಪುತ್ರರಾಗಿ 1900 ರ ಜುಲೈ 27ರಂದು ಸಂಗನಬಸವ ಶಿವಯೋಗಿಗಳು ಜನಿಸಿದರು. ಉಕ್ಕಲಿ ಗ್ರಾಮದಲ್ಲಿ ಪ್ರಥಮಿಲ ಶಿಕ್ಷಣ ಮುಗಿಸಿದ ಇವರು ಬಾಲ್ಯದಲ್ಲೆ ಪುರಾಣ ಪ್ರವಚಣ ಪೌರಾಣಿಕ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು.
          ಬಬಲೇಶ್ವರ ಶ್ರೀ ಶಾಂತವೀರ ಸ್ವಾಮಿಗಳಿಂದ ಸಂಸೃತ ಕಲಿತು 1916ರಲ್ಲಿ ಬಂಥನಾಳ ಮಠಕ್ಕೆ ನಾಲ್ಕನೇ ಪೀಠಾಧಿಪತಿಯಾಗಿ ನಿಯೊಜನೆಗೊಂಡರು. ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು ಅವುಗಳು ಇಂದು ಶತಮಾನ ಸಂಭ್ರಮದಲ್ಲಿದ್ದು ಶ್ರೀಗಳ ಕೀರ್ತಿ ಕಿರೀಟಗಳು.
        1923ರಲ್ಲಿ ಕರ್ನಾಟಕದ ಗಾಂದಿ ಹರ್ಡೆಕರ್ ಮಂಜಪ್ಪನವರಿಂದ ರಾಷ್ಟ್ರದೀಕ್ಷೆ ಪಡೆದರು. ಹರ್ಡೆಕರ್ ಮಂಜಪ್ಪನವರು ಒಂದು ರಾಷ್ಟ್ರ ಬೆಳೆಯಬೇಕಾದರೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣ ಅವಶ್ಯ ಎಂದು ಹೇಳಿದರು. ಅಂದಿನಿಂದ ಖಾದಿ ಧರಿಸಿ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರದ್ವಜಾರೋಹಣ ಮಾಡಲು ಪ್ರಾರಂಬಿಸಿದರು.
         1925ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಯವರು ಕಟ್ಟಿದ ಬಿ.ಎಲ್.ಡಿ.ಇ ಸಂಸ್ಥೆಯ ಅದ್ಯಕ್ಷರಾಗಿ ಶೈಕ್ಷಣಿಕ‌ ಕೇಂದ್ರ ಮತ್ತು ದಾಸೋಹ ನಿಲಯ ಸ್ಥಾಪಿಸಿದರು. 1950 ರಲ್ಲಿ ಲಚ್ಯಣ ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953 &  1963ರಲ್ಲಿ ಮಂಟಪ‌ ಪೂಜೆ ಮಾಡಿದ್ದಾರೆ. ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರಗಣಾಧೀಶ್ವರರ ಪೂಜೆ ನೇರವೇರಿಸಿದರು ಈ ಮಹಾತ್ಕಾರ್ಯದ ಸ್ಮರನಾರ್ಥ ಬೃಹತ್ ಲಿಂಗದಾಕಾರದ ಮಂದಿರಲ್ಲಿ 770 ಲಿಂಗಗಳನ್ನು ಸ್ಥಾಪಿಸಿ ಕೀರ್ತಿ ಗಳಿಸಿದ್ದಾರೆ. ಈ ಲಿಂಗದ ಗುಡಿ ಇಂದು ಲಕ್ಷಾಂತರ ಭಕ್ತರ ಶೃದ್ಧಾಕೇಂದ್ರ.
            ಲಚ್ಯಾಣದಲ್ಲಿ  ಅಮರಗಣಾಧೀಶ್ವರ ಪೂಜೆ ಲಕ್ಷದೀಪೋತ್ಸವದಂತ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಕೇದ್ರಗಳತ್ತ ಸೆಳೆದಿದ್ದಾರೆ. ತಾವು ಮಾಡಿದ ಪ್ರವಚನಗಳಿಂದ ಬಂದ ಹಣವನ್ನು ಶಿಕ್ಷಣ ಕ್ಷೇತ್ರ ಬೆಳವಣಿಗೆಗಾಗಿ ಬಳಿಸಿದ್ದಾರೆ ಹಲವಾರು ಶಾಲೆ ಗಳನ್ನು ಕಟ್ಟಿ ಬೆಳೆಸಿದ್ದಾರೆ. ನಿತ್ಯ ನಿರಂತರ ದಾಸೂಹ ಮಾಡಿ ದಾಸೋಹ ಮೂರ್ತಿಯಾಗಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಶ್ರೀ ಮಠದಲ್ಲಿ ಆಶ್ರಯ, ನೆಲೆ ನೀಡಿ ರಕ್ಷಿಸಿದ್ದಾರೆ.  ಶ್ರೀಗಳು ದಾಸೋಹ, ಶೈಕ್ಷಣಿಕ, ರಾಷ್ಟ್ರಭಕ್ತಿ,  ಧರ್ಮಜಾಗೃತಿ ಮೆರೆದು 1972 ಮೇ 7ರಂದು ಲಿಂಗೈಕ್ಯರಾದರು.
   ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಿಜವಾಯ್ತು ಶಿವಯ್ಯ ಶ್ರೀಗಳ ಹೇಳಿಕೆ

ಶರಣ ಭಾವ, ಸರಳ ಜೀವ ಶ್ರೀ ಬಿ ಎಂ‌ ಪಾಟೀಲ

ಗುಡ್ಡಾಪುರ ಶ್ರೀ ದಾನಮ್ಮ ದೇವಿ