ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಇಮೇಜ್
ಚಿತ್ರ: ಮಲ್ಲಿಕಾರ್ಜುನ  ಸ್ವಾಮೀಜಿ ಚಿತ್ರ : ಜ್ಞಾನಯೋಗಾಶ್ರಮದ ಪ್ರಣವಮಂಟಪ ಪ್ರವಚನ ಮೂಲಕ ಜನರನ್ನು ಪರಿವರ್ತಿಸಿದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ 🙏🙏    ಅಜ್ಞಾನ ಅಳಿಸಿ ಸುಜ್ಞಾನದೆಡೆಗೆ ಕೊಂಡೊಯ್ಯುವ ಗುರುಗಳನ್ನು ನೆನೆಯುವ ಪರ್ವದಿನವೇ ಗುರುಪೌರ್ಣಿಮೆ. ಇದು ಎಲ್ಲ ಧರ್ಮದವರಿಗೂ ಪವಿತ್ರ.  ಅಂತೆಯೇ ಪ್ರವಚನಗಳ ಮೂಲಕ ಭಕ್ತರ ಅಂಧಕಾರ ನೀಗಿಸಿ ಸುಜ್ಞಾನದೆಡೆಗೆ ದಾರಿ ತೋರಿದ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು  ಗುರುಪೌರ್ಣಿಮೆಯಂದು ಆರಾಧಿಸಲಾಗುತ್ತಿದೆ.  ⛳ಮನುಕುಲದ ಉದ್ಧಾರಕ:- ಯುಗಪುರುಷ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಬಾಲ್ಯದ ಹೆಸರು ಮುದುಕಪ್ಪ. ಇವರು 1903 ಅಗಸ್ಟ 15ರಂದು ಸವದತ್ತಿ ತಾಲೂಕಿನ ಹಂಚಿನಾಳದ ಚನ್ನವೀರಪ್ಪ ಮತ್ತು ನೀಲಮ್ಮ ದಂಪತಿಯ ಪವಿತ್ರ ಗರ್ಭದಲ್ಲಿ ಜನಿಸಿದರು. ತಾಯಿಯಿಂದ ಅಕ್ಷರಾಭ್ಯಾಸ ಮಾಡಿದ ಮುದುಕಪ್ಪ ಉತ್ತಮ ಕಂಠಸಿರಿ ಹೊಂದಿದ್ದರು. ಭಕ್ತಪ್ರಲ್ಹಾದ, ಶ್ರವಣಕುಮಾರ ಮತ್ತು ಅನೇಕ ಭಕ್ತಿ ಪ್ರಧಾನ ನಾಟಕಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದರು.       ಇವರ ಕಂಚಿನ ಕಂಠಕ್ಕೆ ತಲೆದೂಗಿದ ಗದುಗಿನ ಶಿವಾನಂದರು ತಮ್ಮ ಜ್ಞಾನ ಪ್ರಸಾರ ಕಾರ್ಯಕ್ಕೆ ಸೇರಿಸಿಕೊಂಡರು. ಮುದುಕಪ್ಪನಿಗೆ 1924ರಲ್ಲಿ ದೀಕ್ಷೆ ನೀಡಿದರು. ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳು ಮೀರಜನ  ಕಲ್ಲಪ್ಪ ಜಕಾತೆ ಅವರ ಮನೆಯಲ್ಲಿ ನಿಜಗುಣ ಶಾಸ್ತ್ರ ಪ್ರವ

ವಚನ ಪಿತಾಮಹ ರಾವ್ ಬಹದ್ದೂರ್ ಡಾ|| ಫಕೀರಪ್ಪ ಗುರಬಸಪ್ಪ ಹಳಕಟ್ಟಿ

ಇಮೇಜ್
                 ಕೆರೆಯನ್ನು ಕಟ್ಟಿಸಿ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲೆ ಕಾಲೇಜು ತೆರೆಸಿ, ಜನರ ಉದ್ದಾರಗೈದ ಮಹಾಪುರುಷ ಶ್ರೀ ಫ ಗು ಹಳಕಟ್ಟಿಯವರು, ಹಾಳಾಗುತ್ತಿದ್ದ ೧೨ನೇ ಶತಮಾನದ ಬಸವಾದಿ ಶರಣರ ವಚನಗಳ ತಾಳೆಗರಿಗಳನ್ನು ಸಂಗ್ರಹಿಸಿ ರಕ್ಷಿಸಿದ ಶರಣ ಸರಳ ಜೀವಿ ಅಧುನಿಕ ವಿಜಯಪುರದ ನಿರ್ಮಾತೃ. ಪ್ರತಿವರ್ಷ ಜುಲೈ ೨ ರಂದು ಹಳಕಟ್ಟಿಯವರ ಜನ್ಮ ದಿನಾಚರಣೆಯನ್ನು ವಿಜಯಪುರದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಚರಿಸುತ್ತ ಬಂದಿವೆ.           ಕನ್ನಡದ ಕಣ್ವ ಬಿಎಂಶ್ರೀ ವಿಜಯಪುರಕ್ಕೆ ಬಂದಾಗ ಸ್ಥಳೀಯ ಸಾಹಿತಿಯೊಬ್ಬರು ಗೋಳಗುಮ್ಮಟ ನೋಡಲು ಕರೆದುಕೊಂಡು ಹೋರಟರು. ಆದರೆ ಬಿಎಂಶ್ರೀ ಮೊದಲು ನನ್ನನ್ನು ವಚನ ಗುಮ್ಮಟಕ್ಕೆ ಕರೆದೊಯ್ಯಿರಿ ಎಂದರು. ಜುಲೈ 2 ವಚನಗುಮ್ಮಟ ವಚನ ಪಿತಾಮಹ ರಾವ್ ಬಹದ್ದೂರ ಡಾ|| ಫ.ಗು.ಹಳಕಟ್ಟಿ ಯವರ 139ನೇ ಜನ್ಮದಿನ.        ಫಕೀರಪ್ಪ ಗುರಬಸಪ್ಪ ಹಳಕಟ್ಟಿಯವರು ಶರಣ ದಂಪತಿಗಾಳಾದ ದಾನಮ್ಮ ಮತ್ತು ಗುರಬಸಪ್ಪನವರ ಮಗನಾಗಿ 1880 ರ ಜುಲೈ 2 ರಂದು ಜನಿಸಿದರು. ‌ತಂದೆ ಗುರಬಸಪ್ಪ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ತನ್ನ ಬಾಲ್ಯವನ್ನು ಮುಗಿಸಿ ಮೆಟ್ರಿಕ್ ಶಿಕ್ಷಣವನ್ನು 1896ರಲ್ಲಿ ಮುಗಿಸಿ ಮುಂಬೈ ಸೇಂಟ್ ಝೇವಿಯರ್ ಕಾಲೇಜ ಸೇರಿ 1901ರಲ್ಲಿ ಬಿಎಸ್.ಸಿ ಪಾಸಾಗಿ 1904 ರಲ್ಲಿ ಎಲ್ ಎಲ್ ಬಿ ಪದವಿ ಪಡೆಯುತ್ತಾರೆ.       ಬೆಳಗಾವಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಮುಂದೆ ವಿಜಯಪುರವನ