ಪೋಸ್ಟ್‌ಗಳು

ನವೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುಡ್ಡಾಪುರ ಶ್ರೀ ದಾನಮ್ಮ ದೇವಿ

ಇಮೇಜ್
ವಿಶ್ವದಲ್ಲಿ ಶಾಂತಿ ಅಶಾಂತಿಗಳ ಧರ್ಮ ಅಧರ್ಮ ಸಂಘರ್ಷ ನಡೆದಾಗ ಸುಳ್ಳು ಸತ್ಯದ ಮೇಲೆ ಮೆರೆದಾಡುತ್ತಿರುವಾಗ ಮನುಕುಲದ ಉದ್ದಾರಕ್ಕಾಗಿ ಧರೆಗೆ ಅವತರಿಸಿ ಸಾದಾರಣ ಜೀವನದಲ್ಲಿ ಸುದಾರಣೆ ತಂದು ನಾಡಿನ ಜನರ ಅಜ್ಞಾನ ಅಳಿಸಿ ಸುಜ್ಞಾನ ತೋರಿದ ಮಹಾನ್ ಶರಣ ಸಂತ ಮಹಾ ತಪಸ್ವಿಗಳ ನಾಡು ನಮ್ಮದು. ಇವರ ಸಾಲಿನಲ್ಲಿ ಬರುವ 12 ನೇ ಶತಮಾನದ ಶ್ರೀ ದಾನಮ್ಮದೇವಿ ತಮ್ಮ ದಾನ ಧರ್ಮ ದಿಂದ  ಕೋಟ್ಯಂತರ ಜನರ ಅಮ್ಮನಾಗಿ ಗುಡ್ಡಾಪುರದಲ್ಲಿ ನೆಲೆಸಿದ್ದಾರೆ.        ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಪಂಚಾಳ ಮನೆತನದ ಶ್ರೀ ವೀರಭದ್ರನ ಪರಮ ಭಕ್ತರಾದ ಅನಂತರಾಯ ಮತ್ತು ಶಿರಸಮ್ಮ ದಂಪತಿಗೆ ಬಹಾಲ ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಕೊರಗೂ ಇರುತ್ತದೆ. ದಂಪತಿಗಳು ವೀರಭದ್ರನನ್ನು ಬೆಡಿಕೊಳ್ಳಲಾಗಿ ಸ್ವಪ್ನದಲ್ಲಿ ಬಂದು ಆಶೀರ್ವಾದ ಮಾಡಿದ ನವಮಾಸ ಕಳೆದ ನಂತರ ಶಿರಸಮ್ಮ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನಲ್ಲಿನ ಅಮೋಘ ಪ್ರಜ್ವಲತೆ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ.   ಮಗು ಹಾಲು ಕುಡಿಯದಾದಾಗ ಒಂದು ಚಿಂತೆ ಶುರುವಾಗಿ ಬಿಡುತ್ತದೆ. ಜಂಗಮರ ಆದೇಶದಂತೆ ಜನನದಿಂದ ಹದಿಮೂರನೇ ದಿನಕ್ಕೆ ಮಂಗಲ ಗೀತೆ ಹಾಡುತ್ತ ಲಿಂಗದಾರಣೆ ಮಾಡುತ್ತಿದ್ದಂತೆ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಎಲ್ಲರೂ ಸೇರಿ ಮಗುವಿಗೆ ಲಿಂಗಮ್ಮ ಎಂದು ನಾಮಕರಣ ಮಾಡುತ್ತಾರೆ. ತಂದೆ    ತಾಯಿಯರ ಲಿಂಗಪೂಜೆ ಶಿವಶರಣರ ಕಥೆ ಕೇಳಿ ಪ್ರೇತಿತಲಾದ ಲಿಂಗಮ್ಮ ಕಲ್ಯಾಣದಲ್ಲಿರ