ಪೋಸ್ಟ್‌ಗಳು

ಜನವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೈತರ ಸೀತನಿ ಪಾರ್ಟಿ

ಇಮೇಜ್
         ಚಳಿಯ ನಡುವೆ ಹೋಲದಲ್ಲಿ  ಎಳೆಯ ಜೋಳದ ಕಾಳುಗಳನ್ನು  ಹುರಿದು ಬಿಸಿ ಮಾಡಿ ತಿನ್ನುವುದರ ಮಜವೇ ಬೇರೆ. ಬೇಕೆಂದಾಗಲೆಲ್ಲ ಸಿಗುವ ಭಾಗ್ಯ ಮತ್ತು ಮಜ ಇದಲ್ಲ ಪ್ರಕೃತಿ ಕೊಟ್ಟಾಗ ಮಾನವರಾದ ನಾವು ಪ್ರಕೃತಿಗೆ ಕೃತಜ್ಞರಾಗಿ ಅನುಭವಿಸಿ ಸವಿಯಬೇಕಷ್ಟೆ.              ಸಂಕ್ರಾಂತಿ ಹಬ್ಬದ ವೇಳೆಗೆ ನಮ್ಮ ರೈತರು ಫಸಲಿನ ‌ಸಂಭ್ರಮದಲ್ಲಿರುತ್ತಾರೆ. ಈ ವೇಳೆಗಾಗಲೇ ಬೆಳೆದ ಬೆಳೆ ಬೇಳೆದು ನಿಂತು ರಾಶಿ ಮಾಡಿ ಗಂಟು ಕಟ್ಟವ ಸಮಯ. ಬೆಳೆ ಮತ್ತು ಪ್ರಕೃತಿ ನಡುವಿನ ಸಂಬಂಧ ರೈತರಿಗಷ್ಟೆ ಗೊತ್ತು ವರ್ತಮಾನಕ್ಕೆ ತಕ್ಕಂತೆ ಬೆಳೆ ಬೆಳೆದು ಫಸಲುಂಡು ಖುಷಿಯಾಗುತ್ತಾರೆ. ಬೆಳೆ ಬೆಳೆದು ರಾಶಿ ಮಾಡುವುದಷ್ಟೆ ಅಲ್ಲ ಅದನ್ನು ಆರಾಧಿಸುವುದು ಕೂಡ ಆತನ ಕರ್ತವ್ಯ ಎಂದು ನಂಬುತ್ತಾನೆ. ಈ ನಂಬುಗೆಗೆ ಪ್ರಕೃತಿ ದೇವಿ ಆತನ ಕೈ ಹಿಡಿಯುತ್ತಾಳೆ.      ರಾಶಿ ಮಾಡುವ ಮುನ್ನ ಬೆಳೆಯನ್ನು ಗಮನಿಸಿ ಎಳೆಯ ಕಾಳಗಳನ್ನು ಹುರಿದು ತಮ್ಮ ಪರಿವಾರದೊಂದಿಗೆ ಸಣ್ಣದೊಂದು ಪಾರ್ಟಿಕೂಡಾ ರೈತ ಮಾಡುತ್ತಾನೆ. ಇದಕ್ಕೆ ಗ್ರಾಮೀಣ ಭಾಷೆಯಲ್ಲಿ ಸೀತನಿ ಎನ್ನುತ್ತಾರೆ. ಈ ಎಳೆಯ ಕಾಳುಗಳ  ಮಹತ್ವ ಗೊತ್ತಾದರೆ ನೀವು ಈ ಬೆಳೆಗೆ ಬೆಲೆ ಕಟ್ಟಿ ಕೊಂಡುಕೊಳ್ಳಲು ಸಾಲುಗಟ್ಟಿ ನಿಲ್ಲುತ್ತೀರಿ!!! ಅಷ್ಟು ಪೌಷ್ಠಿಕಾಂಶದ ಆಹಾರ ಈ ಸೀತನಿ ಸಿಗುವುದು ಪ್ರಕೃತಿದತ್ತ ಕೊಡುಗೆ.    ‌‌      ಸಾಮಾನ್ಯವಾಗಿ ಈ ರೈತರ ಪಾರ್ಟಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಾಣಸಿಗುತ್ತವೆ. ರೈತ

ಶತಮಾನ ಸಂಭ್ರಮಕ್ಕೆ ಸಜ್ಜಾದ ಸಿದ್ದೇಶ್ವರ ಜಾತ್ರೆ

ಇಮೇಜ್
ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯ? ಚಂದ್ರನು ಗಂಗೆಯ ತಡದಲ್ಲಿದ್ದಡೇನಾಗುವುದಯ್ಯ? ಕಳಂಕ ಬಿಡದಾಯಿತ್ತಯ್ಯ ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಘಾತವ ಮಾಡದವನೆ, ಪರಮಪಾವನ ನೋಡಾ, ಕಪಿಲಸಿದ್ದಮಲ್ಲಿಕಾರ್ಜುನಾ.                ‌          12ನೇ ಶತಮಾನದಲ್ಲಿ ಹಲವಾರು ಶರಣರು ಮನುಜ ಕುಲದ ಅಭ್ಯುದಯಕ್ಕಾಗಿ, ಈ ಧರೆಯ ಏಳಿಗೆಗಾಗಿ  ಶ್ರಮಿಸಿದ್ದಾರೆ. ತಮ್ಮ ಅತ್ಯಮುಲ್ಯ ವಚನ ಸಾಹಿತ್ಯದ ಮೂಲಕ ಸಮಾನತೆ, ಸಾಮಾಜಿಕ ಕಾಳಜಿ ಕಾಯಕ ತತ್ವ ದಾಸೋಹ ಆದರಿಸಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇವರ ಸಾಲಲ್ಲಿ ಕರ್ಮಯೋಗಿ ಸಿದ್ದರಾಮರೂ ಕೂಡ ಒಬ್ಬರು. ಆರಾದ್ಯದೈವ ಶ್ರೀ ಕಪಿಲ ಸಿದ್ದಮಲ್ಲಿಕಾರ್ಜುನನ ಅಂಕಿತನಾಮದಿಂದ ಸಹಸ್ರ ವಚನಗಳನ್ನು ರಚಿಸಿದ್ದಾರೆ.     ‌‌‌        ಈಗಿನ ಮಹಾರಾಷ್ಟ್ರದ ಸೊಲ್ಹಾಪುರ ಆಗಿನ ಸೊನ್ನಲಗಿಯಲ್ಲಿ ಮುದ್ದಗೌಡ ಮತ್ತು ಸುಗ್ಗಲಾದೇವಿ ಪುತ್ರನಾಗಿ ಕ್ರಿ.ಶ 1165ರಲ್ಲಿ ಜನಿಸಿದರು.          ‌‌ ಶಿವತತ್ವ ಪ್ರಾಚಾರಕ್ಕಾಗಿ ಸಿದ್ದಾನಾಗಿ ಬಂದಿದ್ದ ಸಿದ್ದೇಶ್ವರ ಬಾಲ್ಯದಲ್ಲಿ ವಿಶಿಷ್ಠ ಶಾಂತ ಸ್ವಭಾವದವನಾಗಿದ್ದ ಎಲ್ಲರಂತೆ ಎಲ್ಲರೊಡನೆ ಬೆರೆಯುವ ಗುಣ ಇರಲಿಲ್ಲ ಹಾಗಾಗಿ ಇವನನ್ನು ಬುದ್ದಿಮಾಂದ್ಯ ಎಂದೂ ಕರೆಯುತ್ತಾರೆ. ಮಗನ‌ ಈ ಪರಿಸ್ಥಿತಿ ಅರಿತು ಪರಿಸರದೊಂದಿಗೆ ಬೆರೆಯಲು ದನ ಕಾಯಲು ಕಳುಹಿಸುತ್ತಾನೆ. ಪ್ರತಿದಿನ ದನಕಾಯುವುದು ಸಿದ್ದರಾಮನ ಕಾಯಕವಾಯಿತು. ದನಗಳನ್ನು ಮೇಯ