ಪೋಸ್ಟ್‌ಗಳು

ಮೇ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿಜವಾಯ್ತು ಶಿವಯ್ಯ ಶ್ರೀಗಳ ಹೇಳಿಕೆ

ಇಮೇಜ್
              ಅಚ್ಚಿಕಡಿಯಿಂದ ಇಚ್ಚಿಕಡಿ ಇಚ್ಚಿಕಡಿಯಿಂದ ಅಚ್ಚಿಕಡಿ ಈ ಸಾಲಾ ಇಲೆಕ್ಷನ್ ಮಸ್ತ ಇರ್ತದ ನೀವೆಂದೂ ಇಂತಾ ಇಲೆಕ್ಷನ್ ನೋಡಿರಂಗಿಲ್ಲಾ ಮುಂದು ನೋಡಲ್ಲ ಹಂಗ ಲಟಿಪಿಟಿ ಕಟಿಪಿಟಿ ಐತಿ ಎಂದು ಶಿವಯ್ಯ ಶ್ರೀಗಳು ಹೇಳಿದ ಹೇಳಿಕೆ ಈಗ ಜಿಲ್ಲೆಯ ಜನರ ಬಾಯಲ್ಲಿ ಮತ್ತೆ ಗುನಗುತ್ತಿದೆ. ಅದಕ್ಕೆ ಕಾರಣ ಸದ್ಯದ ರಾಜಕೀಯ ವಾತಾವರಣ.              ವಿಜಯಪುರ ಜಿಲ್ಲೆಯ ಕತಕನಹಳ್ಳಿ ಗ್ರಾಮ ಶ್ರೀ ಗುರು ಚಕ್ರವರ್ತಿ ಸದಾಶಿವ ಸ್ವಾಮಿಗಳ ಮಠದಿಂದ ಹೆಚ್ಚು ಜಾಗೃತ ಮತ್ತು ಭಕ್ತರ ಶೃದ್ದಾಕೇಂದ್ರವಾಗಿದೆ. ಇಲ್ಲಿನ ಪೀಠಾದ್ಯಕ್ಷರಾದ ಪೂಜ್ಯ ಶ್ರೀಶಿವಯ್ಯ ಶ್ರೀಗಳ ಶಿಸ್ತು ಭಕ್ತಿ, ಭಕ್ತರ ಆರೈಕೆ ಹಾರೈಕೆ ಮತ್ತು ಅವರಾಡುವ ಪ್ರತಿ ಮಾತು ಪ್ರಚಲಿತವಾಗುತ್ತಿರುವುದು ಈ ಕ್ಷೇತ್ರದ ಮಹಿಮೆ ಇನ್ನಷ್ಟು ಹೆಚ್ಚಿಸಿದೆ.                ಪ್ರತಿವರ್ಷ ಯುಗಾರಂಭದ ಯುಗಾದಿಯ ಶುಭದಿನ ನಡೆಯುವ ಜಾತ್ರೆಕೂಡ ಬಹಳ ವೈಶಿಷ್ಟ್ಯ ಹೊಂದಿರುತ್ತದೆ.  ಅಂದು ಶಿವಯ್ಯ ಶ್ರೀಗಳು ಹೇಳುವ ಗುರುವಿನ ಅಂತಃಕರಣದ ನುಡಿಗಳು ಹೆಚ್ಚು ಮಹತ್ವ ಪಡೆಯುತ್ತವೆ. ಜಿಲ್ಲೆಯ ತುಂಬ ಅದರ ವಿಶ್ಲೆಷಣೆ ನಡೆಯುತ್ತದೆ.                 ಕತಕನಹಳ್ಳಿ ಗ್ರಾಮ ದೇವತೆ ಲಗಮವ್ವ ದೇವಿ ದೇವಸ್ಥಾನದ ಕಟ್ಟೆಯಲ್ಲಿ ರಂಗೋಲಿ ಬಿಡಿಸಿದ ಕಂಬಳಿಯ ಮೇಲೆ ನಿಂತು ಗುರುವಿನ ಅಂತಃಕರಣ ನುಡಿಗಳನ್ನು ನುಡಿಯುತ್ತಾರೆ. ಅದಕ್ಕೆ ಕಾಲಜ್ಞಾನ ಮತ್ತು ಕಾರಣಿಕ ನುಡಿಗಳೆಂದು ಕರೆಯುತ್ತಾರೆ. ಪ್ರತಿ ಯುಗಾದಿಯಂದು ಆ ವ