ನನ್ನ ಸಿರಿ ಶ್ರೀ ಗೌರಿ
ಕೇಳಿದ್ದೆ ವರವನ್ನು ದೇವರಲಿ ಸಿರಿಯನ್ನು ಕೊಟ್ಟನು ಭಗವಂತ ಶ್ರೀಗೌರಿಯನ್ನು ಬಿಗುಮಾನವಿಲ್ಲ ಬಿನ್ನಾಣವಿಲ್ಲ ಸಹಜ ಸುಂದರಿಗೆ ಆಡಂಭರ ಬೇಕಿಲ್ಲ ಸರಳತೆಗೆ ಸಾಕ್ಷಿಯಂತಿಹಳು ಸಾರ್ಥಕತೆಯ ಕಣ್ಣಿನಂತಿಹಳು. ಕೇಳಿಲ್ಲ ಏನನ್ನು ಬೇಕು ಬೇಡಗಳನ್ನು ತಾ ಕೇಳುವಳು ದೇವನಲಿ ನಾ ಸುಖವಿರಲೇಂದು.