ಪೋಸ್ಟ್‌ಗಳು

ಫೆಬ್ರವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನವರಸಪುರಕ್ಕೆ ಒಂಬತ್ತರ ನಂಟು: ಶಾಹಿ ಸಾಮ್ರಾಜ್ಯದ ಸಂಗೀತ ಸಾಹಿತ್ಯಕ್ಕೆ‌ ಸಾಕ್ಷಿ ಸಂಗೀತ ಮಹಲ

ಇಮೇಜ್
         ಐತಿಹಾಸಿಕ ನಗರ ವಿಜಯಪುರದಿಂದ 6ಕೀಮಿ ದೂರದಲ್ಲಿರುವ ನವರಸಪುರ ಆದಿಲ್‌ಶಾಹಿ ಸಾಮ್ರಾಜ್ಯದ ಸಾಹಿತ್ಯ ಮತ್ತು ಸಂಗೀತ ಪ್ರೀತಿ, ಮತ್ತು ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ. ಅಂದಿನ ಆದಿಲ್ ಶಾಹಿ ಅರಸರು ನಿರ್ಮಾಣ ಮಾಡಿದ ಅದ್ಬುತ ಕಟ್ಟಡಗಳಲ್ಲಿ ಒಂದಾದ ಗೋಲಗುಂಬಜ್, ಇಬ್ರಾಹಿಮ್ ರೊಜ, ಬಾರಾಕಮಾನ ಮತ್ತು ನಗರದೆಲ್ಲೆಡೆ ಇರುವ ಮಹಲು ಕೋಟೆ ಕಂದಕ ಕಮಾನು ಬಾವಿ ಗಂಜಗಳು ಪ್ರತಿಯೋಂದು ತಮ್ಮ ಐತಿಹಾಸಿಕ ಕಥೆ ಹೇಳುತ್ತವೆ.           ಈ ಸ್ಮಾರಕ ಗಳಲ್ಲಿ ಒಂದಾದ ನವರಸಪುರದ ಸಂಗೀತ-ನಾರಿ ಮಹಲ ಇಲ್ಲಿನ ಪ್ರಮುಖ ಆಕರ್ಷಣೆ ತಾಣ. ಸಂಗೀತ ಮಹಲ ಇಬ್ರಾಹಿಮ್ ಎರಡನೇ ಆದಿಲ್ ಷಾ ತನ್ನ ಸಂಗೀತ ಬಗೆಗಿನ ಪ್ರಿತಿ ಬಿಂಬಿಸುತ್ತದೆ. ತನ್ನ ಆಡಳಿತಾವಧಿಯಲ್ಲಿ ಈ ಮಹಲು ನಿರ್ಮಿಸಿ ಅನೇಕ ಸಂಗೀತ ವಿದ್ವಾಂಸರಿಗೆ ಆಸರೆಯಾಗಿದ್ದರು.           ರಾಜರುಗಳು ಸ್ವತಃ ಕಲಾವಿದರು . ಶಾಹಿ ಸಾಮ್ರಾಜ್ಯದ ಅನೇಕ ರಾಜರು ಸಂಗೀತ ವಿದ್ವರಾಗಿದ್ದರು. ಸಂಗೀತನ್ನು ಪ್ರೀತಿಸಿ ಗೌರವಿಸುವ ಇವರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪ್ರವೀಣರು. ಯೂಸುಪ್ ಆದಿಲ್ ಷಾ ಮಾತ್ತು ಎರಡನೇ ಆದಿಲ್ ಷಾ ತಬಲಾ, ಗಿಟಾರ್, ಸಿತಾರ, ವೀಣಾ, ಮತ್ತು ಅನೇಕ ವಾದ್ಯಗಳನ್ನು ನುಡಿಸುತ್ತಿದ್ದರು.             ಸಂಗೀತ ವಿದ್ವಾಂಸರ ಸಮಾಗಮಕ್ಕೆ ಸೂಕ್ತ ವೇದಿಕೆ ಸಂಗೀತ ಮಹಲ:-            ಬೃಹದ್ದಾಕಾರದ ವೇದಿಕೆ ಅದರ ಮುಂದೆ ನೀರಿನ‌ಹೊಂಡ ಸುತ್ತಲು ರಕ್ಷಣೆಗೆ ಗೊಡೆ ಎಲ್ಲದಿಕ್ಕಿಗೂ ಮಹಾದ್ವಾರ