ನವರಸಪುರಕ್ಕೆ ಒಂಬತ್ತರ ನಂಟು: ಶಾಹಿ ಸಾಮ್ರಾಜ್ಯದ ಸಂಗೀತ ಸಾಹಿತ್ಯಕ್ಕೆ‌ ಸಾಕ್ಷಿ ಸಂಗೀತ ಮಹಲ

         ಐತಿಹಾಸಿಕ ನಗರ ವಿಜಯಪುರದಿಂದ 6ಕೀಮಿ ದೂರದಲ್ಲಿರುವ ನವರಸಪುರ ಆದಿಲ್‌ಶಾಹಿ ಸಾಮ್ರಾಜ್ಯದ ಸಾಹಿತ್ಯ ಮತ್ತು ಸಂಗೀತ ಪ್ರೀತಿ, ಮತ್ತು ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ. ಅಂದಿನ ಆದಿಲ್ ಶಾಹಿ ಅರಸರು ನಿರ್ಮಾಣ ಮಾಡಿದ ಅದ್ಬುತ ಕಟ್ಟಡಗಳಲ್ಲಿ ಒಂದಾದ ಗೋಲಗುಂಬಜ್, ಇಬ್ರಾಹಿಮ್ ರೊಜ, ಬಾರಾಕಮಾನ ಮತ್ತು ನಗರದೆಲ್ಲೆಡೆ ಇರುವ ಮಹಲು ಕೋಟೆ ಕಂದಕ ಕಮಾನು ಬಾವಿ ಗಂಜಗಳು ಪ್ರತಿಯೋಂದು ತಮ್ಮ ಐತಿಹಾಸಿಕ ಕಥೆ ಹೇಳುತ್ತವೆ.
          ಈ ಸ್ಮಾರಕ ಗಳಲ್ಲಿ ಒಂದಾದ ನವರಸಪುರದ ಸಂಗೀತ-ನಾರಿ ಮಹಲ ಇಲ್ಲಿನ ಪ್ರಮುಖ ಆಕರ್ಷಣೆ ತಾಣ. ಸಂಗೀತ ಮಹಲ ಇಬ್ರಾಹಿಮ್ ಎರಡನೇ ಆದಿಲ್ ಷಾ ತನ್ನ ಸಂಗೀತ ಬಗೆಗಿನ ಪ್ರಿತಿ ಬಿಂಬಿಸುತ್ತದೆ. ತನ್ನ ಆಡಳಿತಾವಧಿಯಲ್ಲಿ ಈ ಮಹಲು ನಿರ್ಮಿಸಿ ಅನೇಕ ಸಂಗೀತ ವಿದ್ವಾಂಸರಿಗೆ ಆಸರೆಯಾಗಿದ್ದರು.
          ರಾಜರುಗಳು ಸ್ವತಃ ಕಲಾವಿದರು.
ಶಾಹಿ ಸಾಮ್ರಾಜ್ಯದ ಅನೇಕ ರಾಜರು ಸಂಗೀತ ವಿದ್ವರಾಗಿದ್ದರು. ಸಂಗೀತನ್ನು ಪ್ರೀತಿಸಿ ಗೌರವಿಸುವ ಇವರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪ್ರವೀಣರು. ಯೂಸುಪ್ ಆದಿಲ್ ಷಾ ಮಾತ್ತು ಎರಡನೇ ಆದಿಲ್ ಷಾ ತಬಲಾ, ಗಿಟಾರ್, ಸಿತಾರ, ವೀಣಾ, ಮತ್ತು ಅನೇಕ ವಾದ್ಯಗಳನ್ನು ನುಡಿಸುತ್ತಿದ್ದರು.
           ಸಂಗೀತ ವಿದ್ವಾಂಸರ ಸಮಾಗಮಕ್ಕೆ ಸೂಕ್ತ ವೇದಿಕೆ ಸಂಗೀತ ಮಹಲ:- 
          ಬೃಹದ್ದಾಕಾರದ ವೇದಿಕೆ ಅದರ ಮುಂದೆ ನೀರಿನ‌ಹೊಂಡ ಸುತ್ತಲು ರಕ್ಷಣೆಗೆ ಗೊಡೆ ಎಲ್ಲದಿಕ್ಕಿಗೂ ಮಹಾದ್ವಾರಗಳು ಹಸಿರುಹೊದ್ದ ನೆಲ ಸುಂದರ ವಾತಾವರಣದಲ್ಲಿ ಸಂಗೀತ ಸೇರಿದರೆ ಸ್ವರ್ಗವೇ ಧರೆಗಿಳಿದ ಅನುಭವ, ಆನಂದ, ಉಲ್ಲಾಸ "ನವರಸಗಳ" ಅನುಭವ ಅಗುವುದರಲ್ಲಿ ಅನುಮಾನವಿಲ್ಲ ಅದಕ್ಕಾಗಿಯೇ ಇದಕ್ಕೆ ನವರಸಪುರ ಎಂದು ಹೆಸರು ಬಂತು.
   ನವರಸಪುಕ್ಕೆ ಒಂಬತ್ತರ ನಂಟು
        ಈ ಸಂಗೀತ ಮಹಲಿನ ವಿಶೇಷವೆಂದರೆ ಇಲ್ಲವೂ ಒಂಬತ್ತರೊಂದಿಗೆ ತಳಕುಹಾಕಿಕೊಂಡಿದೆ. ಸಂಗೀತ ಮಹಲ ನಿರ್ಮಾಣವಾಗಲು  9 ವರ್ಷಬೇಕಾದವು, 9000 ಸುವರ್ಣ ನಾಣ್ಯಗಳು, 900ಕಾರ್ಮಿಕರು ಶ್ರಮಿಸಿದ್ದಾರೆ. ಈ ಸಂಗೀತ ಮಹಲ ಗೊಡೆ ನವಕೊನಾಕಾರದಲ್ಲಿದೆ. (ಒಂಬತ್ತು ಗೊಡೆಗಳಿವೆ). ಇಲ್ಲಿ ಸಂಗೀತ ಆಲಿಸಿದರೆ ಒಂಬತ್ತು ರಸಾನುಭವ ಅಗುತ್ತಿತ್ತು . ನವರಸಗಳ ಅನುಭವ ಆಗುತ್ತಿತ್ತು ಎಂದು ಇತಿಹಾಸ ಪುಟಗಳಲ್ಲಿ ಬರೆಯಲಾಗಿದೆ. ಮೆಕ್ಕಾ  ಯಾತ್ರೆಗೆ ಹೊರಟಿದ್ದ ಸಾವಿರಾರು ಜನ ಸಂಗೀತ ಆಲಿಸುತ್ತ ಇಲ್ಲಿಯೆ ಉಳಿದಿದ್ದರಂತೆ!..
        ಪ್ರವಾಸೊದ್ಯಮಕ್ಕೆ ಆಸಕ್ತಿ ತೋರಿಸಿ.
        ಸಂಗೀತ ಮಹಲಿನಲ್ಲಿ ಸ್ಮಾರಕ್ಕ ನಿಮ್ಮೆಲ್ಲರ ಆಸ್ತಿ ಸ್ಮಾರಕ ನಾಶ ಮಾಡಿದರೆ ಜೈಲುವಾಸ ಮತ್ತು ದಂಡ ಕಟ್ಟಲಾಗುವುದು ಎಂದು ಫಲಕಗಳನ್ನು ಅಳವಡಿಸಲಾಗಿದೆಯೆ ಹೊರತು‌ಸೊಕ್ತ ರಕ್ಷಣೆ‌ಇಲ್ಲ‌. ಸ್ಮಾರಕದ ಬಗ್ಗೆ ಯಾವುದೇ ಮಾಹಿತಿ ಸಿಗದೆ ಪ್ರವಾಸಿಗರು ಬರೀ ಕಟ್ಟಡ ಮತ್ತು ವನಗಿದ ಹುಲ್ಲು ನೀರಿಲ್ಲದ ಹೊಂಡ ನೋಡಿ ನಿರಾಸೆಗೊಳ್ಳುತ್ತಾರೆ. ಸಂಗೀತ ಮಹಲಿನ‌ಸುತ್ತ ಸ್ಚಚ್ಛತೆ ಕಾಯ್ದು ರಕ್ಷಣೆಗೆ ಒಬ್ಬ ಸಿಬ್ಬಂದಿ ಸಾಕು. ಪ್ರವಾಸೋದ್ಯಮ ಇಲಾಖೆ ಒಬ್ಬ ಸಿಬ್ಬಂದಿಯನ್ನು ನೇಮಿಸಬೇಕು ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ವೃಕ್ಷಾಭಿಯಾನ ನಡೆದಿದ್ದು ಇಲ್ಲಿ ಗಿಡ ನೆಟ್ಟು ಪೊಷಿಸಿದರೆ ಸ್ಮಾರಕದ ರಕ್ಷಣೆಯು ಆಗುತ್ತದೆ ಮತ್ತು ಪರಿಸರ ರಕ್ಷಣೆಯು ಆಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯ . ಇದಕ್ಕೆ ನೀವೆನಂತೀರಿ





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ