ಪೋಸ್ಟ್‌ಗಳು

ಏಪ್ರಿಲ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಕಲಾಶ್ರೀಮಂತಿಕೆ ಕಲರವ

ಇಮೇಜ್
ಕ್ಯಾಂಪಸ್ ತುಂಬ ದೋತಿ, ರುಮಾಲು, ಪಂಚೆ, ಪೇಟ ಧರಿಸಿದ ಹುಡುಗರು. ಬಣ್ಣ ಬಣ್ಣದ ಸೀರೆ ತೊಟ್ಟು ಚಿತ್ತಾರ ಬಿಡಿಸಿದ ಹುಡುಗಿಯರು. ಒಂದೆಡೆ ತಂತ್ರಜ್ಞಾನಕ್ಕೆ ಸಂಬಂದಿಸಿದ ಆಟಗಳು ನಡೆದರೆ ಮತ್ತೊಂದೆಡೆ ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಹಳ್ಳಿ ಸೊಗಡಿನ ವೈಭವ ಅನಾವರಣ ಗೊಂಡಿತ್ತು ಇದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಡಾ|| ಫ.ಗು. ಹಳಕಟ್ಟಿ ಅಭಿಯಂತರರ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನ ನಡೆದ ಇನ್ವಿಕ್ಟಸ್2017 ರ ಚಿತ್ರಣ.            ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ "ಕಲಾ ಕಾರ್ನರ್" ಎಲ್ಲರ ಗಮನ ಸೆಳೆಯುತ್ತಿತ್ತು. ಮೇವು ತುಂಬಿದ ಎತ್ತಿನ‌ಬಂಡಿ ಮತ್ತು ಸೈಕಲ್ ಪ್ರವೇಶ ದ್ವಾರದಲ್ಲೆ ನೋಡುಗರನ್ನು ಸ್ವಾಗತಿಸುತ್ತಿದ್ದವು. ಕಲಾ ಕಾರ್ನರ್ ಆಯೋಜಕರು ಮಣ್ಣಿನ‌ ಮಕ್ಕಳಂತೆ ದೊತಿ ರುಮಾಲು, ಇಲಕಲ್ ಸೀರೆ ತೊಟ್ಟು ಪ್ರೇಕ್ಷರಿಗೆ ಕಲಾಕೃತಿಗಳ ಮಾಹಿತಿ ನೀಡುತ್ತಿದ್ದರು.              ಕಲಾ ಕಾರ್ನರ್ ನಲ್ಲಿ ಪ್ರದರ್ಶಿಸಕ್ಕಿಡಲಾದ ಚಿತ್ರಗಳು ಜಾತ್ರೆ  ದೇವಸ್ಥಾನ ರೈತರು ಜಾನುವಾರು ಮಹಿಳೆಯರು ಮತ್ತು ಬುದ್ದ ಮಹಾವೀರರಂಥ ಮಹಾನ್ ವ್ಯಕ್ತಿಗಳ ತೈಲ‌ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೊಮ್ಮಗನ‌‌ ಮೇಲಿನ‌ ಅಜ್ಜನ ‌ಮಮಕಾರ, ರೈತ ಜಾನುವಾರುಗಳ ನಡುವಿನ ಸಂಬಂಧ, ಪಾರಿವಾಳದಿಂದ ಇಂದಿನ ಮೊಬೈಲ್ ವರೆಗಿನ ಸಂಪರ್ಕ ಮಾದ್ಯಮಗಳು, ಅಂತರಂಗ ಶುದ್ದಿಯ ಉತ್ತಮ ಸಂದೇಶ ಸಾರುವ ಸುಮಾರು 70ಕ್