ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಕಲಾಶ್ರೀಮಂತಿಕೆ ಕಲರವ

ಕ್ಯಾಂಪಸ್ ತುಂಬ ದೋತಿ, ರುಮಾಲು, ಪಂಚೆ, ಪೇಟ ಧರಿಸಿದ ಹುಡುಗರು. ಬಣ್ಣ ಬಣ್ಣದ ಸೀರೆ ತೊಟ್ಟು ಚಿತ್ತಾರ ಬಿಡಿಸಿದ ಹುಡುಗಿಯರು. ಒಂದೆಡೆ ತಂತ್ರಜ್ಞಾನಕ್ಕೆ ಸಂಬಂದಿಸಿದ ಆಟಗಳು ನಡೆದರೆ ಮತ್ತೊಂದೆಡೆ ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಹಳ್ಳಿ ಸೊಗಡಿನ ವೈಭವ ಅನಾವರಣ ಗೊಂಡಿತ್ತು ಇದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಡಾ|| ಫ.ಗು. ಹಳಕಟ್ಟಿ ಅಭಿಯಂತರರ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನ ನಡೆದ ಇನ್ವಿಕ್ಟಸ್2017 ರ ಚಿತ್ರಣ.
           ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ "ಕಲಾ ಕಾರ್ನರ್" ಎಲ್ಲರ ಗಮನ ಸೆಳೆಯುತ್ತಿತ್ತು. ಮೇವು ತುಂಬಿದ ಎತ್ತಿನ‌ಬಂಡಿ ಮತ್ತು ಸೈಕಲ್ ಪ್ರವೇಶ ದ್ವಾರದಲ್ಲೆ ನೋಡುಗರನ್ನು ಸ್ವಾಗತಿಸುತ್ತಿದ್ದವು. ಕಲಾ ಕಾರ್ನರ್ ಆಯೋಜಕರು ಮಣ್ಣಿನ‌ ಮಕ್ಕಳಂತೆ ದೊತಿ ರುಮಾಲು, ಇಲಕಲ್ ಸೀರೆ ತೊಟ್ಟು ಪ್ರೇಕ್ಷರಿಗೆ ಕಲಾಕೃತಿಗಳ ಮಾಹಿತಿ ನೀಡುತ್ತಿದ್ದರು.
             ಕಲಾ ಕಾರ್ನರ್ ನಲ್ಲಿ ಪ್ರದರ್ಶಿಸಕ್ಕಿಡಲಾದ ಚಿತ್ರಗಳು ಜಾತ್ರೆ  ದೇವಸ್ಥಾನ ರೈತರು ಜಾನುವಾರು ಮಹಿಳೆಯರು ಮತ್ತು ಬುದ್ದ ಮಹಾವೀರರಂಥ ಮಹಾನ್ ವ್ಯಕ್ತಿಗಳ ತೈಲ‌ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೊಮ್ಮಗನ‌‌ ಮೇಲಿನ‌ ಅಜ್ಜನ ‌ಮಮಕಾರ, ರೈತ ಜಾನುವಾರುಗಳ ನಡುವಿನ ಸಂಬಂಧ, ಪಾರಿವಾಳದಿಂದ ಇಂದಿನ ಮೊಬೈಲ್ ವರೆಗಿನ ಸಂಪರ್ಕ ಮಾದ್ಯಮಗಳು, ಅಂತರಂಗ ಶುದ್ದಿಯ ಉತ್ತಮ ಸಂದೇಶ ಸಾರುವ ಸುಮಾರು 70ಕ್ಕೂ ಹೆಚ್ಚು ಚಿತ್ರಕಲೆ ಗಳು ಇಲ್ಲಿದ್ದವು.
           ಇಂಜಿನೀಯರಿಂಗ್ ಕಲಿಯುವ ಹುಡುಗರು ಪಠ್ಯ ಅಲ್ಲದೆ ಹೊರಗಿನ ಜ್ಞಾನಕ್ಕೆ ಹೆಚ್ಚು  ಮಹತ್ವ ನೀಡಬೇಕು, ಪ್ರತಿಯೊಬ್ಬರು ತಮ್ಮದೇ ಜೀವನ ಶೈಲಿಗೆ ತಕ್ಕಂತೆ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು, ನಮ್ಮಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲಾ ಕಾರ್ನಾರ್ ಒಂದು ಉತ್ತಮ ವೇದಿಕೆ ಎಂದು ಸಿವಿಲ್ ವಿಭಾದ ಮುಖ್ಯಸ್ಥರಾದ ಶ್ರೀಮತಿ ಎಸ್ ಎಸ್ ಅಂಗಡಿ ಅಭಿಪ್ರಾಯ ಪಟ್ಟರು.
        ನಗರ ಪ್ರದೇಶ ಮತ್ತು ಗ್ರಾಮೀಣ ಬದುಕಿನ ವ್ಯತ್ಯಸ ವಿವರಿಸುವ ಕಲಾಕೃತಿಗಳನ್ನು ತಯಾರಿಸಲಾಗಿತ್ತು. ಒಂದು ತೆರೆದ ಬಾವಿ ಅದರ ಅರ್ಧಭಾಗ ನೀರು ಮತ್ತು ಹೊಲ ಮತ್ತೊಂದು ಭಾಗ ಕೈಗಾರೀಕರಣ ಮತ್ತು ನಗರೀಕರಣದಿಂದ ನೀರಿನ‌ ಮೂಲ ಕಲುಷಿತಗೊಳ್ಳುತ್ತಿದ್ದು. ತ್ಯಾಜ್ಯ ವಸ್ತುಗಳನ್ನು ಬಾವಿಗೆ ಹಾಕಿ ಅದನ್ನು ಕಲುಷಿತ ಗೊಳಿಸುವ ಮಾದರಿ ಎಲ್ಲರ ಕಣ್ಣು ತೆರೆಸಿತು. ಇವಗಳನ್ನು ತಯಾರಿಸಿದ ಸಿವಿಲ್‌ ವಿಭಾಗದ 8ನೇ ಸೆಮಿಷ್ಟರ್ ವಿದ್ಯರ್ಥಿ ಕಿಶೋರ್ ನುಚ್ಚಿ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದರು.
          ಇಲ್ಲಿನ ಮತ್ತೊಂದು ವಿಶೇಷವೆಂದರೆ ಈ ಕಲಾಕೃತಿಗಳು ಮಾದರಿ ತಾಯಾರಿಕೆಗೆ ಕಾಲೇಜ ಕ್ಯಾಂಪಸ್  ನಲ್ಲಿ ಎಸೆದ ತಾಜ್ಯಗಳನ್ನು ಸಂಗ್ರಹಿಸಿ ಮಾಡಲಾಗಿದೆ. ಯಾವುದೇ ಆಡಂಬರ ಮತ್ತು ದುಂದು ವೆಚ್ಚಕ್ಕೆ ಅವಕಾಶ ನೀಡದೆ ಕಸದಿಂದ ರಸ ಎನ್ನುವಂತೆ ಕೆಲಸ ಮಾಡಿದ್ದಾರೆ ಎಂದು ಪ್ರಾದ್ಯಾಪಕ ನಯೀಮ ಇನಾಮ್ದಾರ ಹೇಳಿದರು.
         ಈ ಪ್ರಯತ್ನಕ್ಕೆ ಹೆಗಲು ಕೊಟ್ಟು ಶ್ರಮಿಸಿದವರು ಅಭಿನಂದನ, ಶಿವಶರಣಪ್ಪ ಬಿರಾದಾರ, ಸೋಮನಾಥ, ಐಶ್ವರ್ಯ ಬಿರಾದಾರ,  ತೇಜಶ್ವಿನಿ ಬಿರಾದಾರ, ಮಂಜುನಾಥ ಹೊಂಬಾಳ ಸೇರಿದಂತೆ 4,6,8 ಸೆಮಿಸ್ಟರ್ ವಿದ್ಯರ್ಥಿಗಳು ಶ್ರಮವಹಿಸಿದ್ದಾರೆ.


 





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ