ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಶಿವ ಶಿವೋ‌ ಹಾಲ ಮಲ್ಲಯ್ಯ ಓಲಮಲ್ಲಯ್ಯ ಸಕ್ಕರಿ ಸವಿಗಾರ ಮಲ್ಲಯ್ಯ ಮಹಾಂತ ಮಲ್ಲಯ್ಯ ಉಘೇ
ಹಾಲಗಿರಿ ಮೇಲಗಿರಿ ಸಿದ್ದಗಿರಿ ಸಿಂಹಾಸನಗಿರಿ
ಶ್ರೀ ಪಾದಕೆ ಮಹಾಂತ ಮಲ್ಲಯ್ಯ ಉಘೇ
ಪಾತಾಳಗಂಗೆ ಜ್ಯೋತಿರ್ಲಿಂಗ ಶ್ರೀ ಪಾದಕೆ ಮಹಾಂತ ಮಲ್ಲಯ್ಯ ಉಘೇ
ಬಂಗಾರ ಗುಡಿ ಬೋಳಮಲ್ಲಿಕಾರ್ಜುನ ಶ್ರೀ ಮಹಾಂತ ಮಲ್ಲಯ್ಯ ಉಘೇ
  ಹೀಗೆ ಶ್ರೀಶೈಲ ಮಲ್ಲಿಕಾರ್ಜುನನ್ನು ನೆನೆಯುತ್ತ ಬೆಟ್ಟದ ಕಲ್ಲು ಮುಳ್ಳುಗಳ ಹಾದಿಯಲ್ಲಿ ಭಕ್ತರು ಹೆಜ್ಜೆಹಾಕುತ್ತಾರೆ. ಯುಗಾದಿ ಹಬ್ಬದಂದು ನಡೆಯುವ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. 
     ಇದೀಗ ಕಂಬಿ ಮಲ್ಲಯ್ಯ ಊರಿನ ಎಲ್ಲೆಡೆ ಮನೆ ಮನೆಗೆ ತೆರಳಿ ದರ್ಶನ ನೀಡುತ್ತಿದ್ದಾನೆ.  ಕಂಬಿ ಒಂದು ಬಿದಿರಿನ‌ ಸಾದನ ಅದಕ್ಕೆ ಮುಂಬದಿ ನಂದಿ ಮತ್ತು ಶಿವಲಿಂಗವನ್ನು ಇರಿಸಿ ಹೊದಿಕೆ ಹೊದಿಸಿ ಪೂಜ್ಯಭಾವದಿಂದ ವಿಶೇಷ ವಿನ್ಯಾಸ ಹೊಂದಿರುತ್ತದೆ.
ಭಕ್ತರು ಈ ಕಂಬಿಯನ್ನು ಮಲ್ಲಯ್ಯ ಎಂದು ತಮ್ಮೊಡನೆ ಶ್ರೀಶೈಲದ ಹಾದಿಯುದ್ದಕ್ಕೂ ಒಯ್ಯುತ್ತಾರೆ . ಕಂಬಿ ಪದಗಳನ್ನು ಹಾಡುತ್ತಾ ಶಿವಬಜನೆ ಮಾಡುತ್ತಾ ಶ್ರೀಶೈಲ ತಲುಪುತ್ತಾರೆ.
ಹಿರಿಯರು ಹೇಳುವ ಪ್ರಕಾರ  ಕಂಬಿ ಒಂದು ಬಿರಿರಿನಿಂದ ಮಾಡಿದ ಸಾದನ, ಶ್ರೀಶೈಲದತ್ತ ಪಯಣ ಬೇಳೆಸುವಾಗ ಬಿದಿರಿನ ಒಂದು ಭಾಗಕ್ಕೆ ಆಕಾರದ ಜೋಳಿಗೆ, ಮತ್ತೊಂದು ಬದಿಗೆ ನೀರನ್ನು ಹಾಕಿ ಒಯ್ಯುತ್ತಿದ್ದರು. ಪ್ರಯಾಣಿಕರಿಗೆ ಇದು ಅತೀ ಉಪಯುಕ್ತ ಮತ್ತು ಅನೂಕೂಲಕರವಾದ್ದರಿಂದ ಅದರ ಮುಂಬಾಗ ನಂದಿ ಮತ್ತಿ ಶಿವಲಿಂಗ ಇಟ್ಟು ಪೂಜಿಸಲಾರಂಭಿಸಿದರು. ಇದು ಮುಂದೆ ಕಂಬಿ ಮಲ್ಲಯ್ಯ ಎಂದು ಕರೆಯಲಾಯಿತು. ಮನೆ ಮನೆಗಳಿಗೆ ತೆರೆಳಿ ದರ್ಶನ ಕೊಟ್ಟು ಶ್ರೀಶೈಲ ಯಾತ್ರೆಗೆ ಬೇಕಾಗುವ ಎಲ್ಲ ಸಿದ್ದತೆಯನ್ನು ಭಕ್ತರ ಸಮ್ಮುಖದಲ್ಲಿ ಮಾಡಿಕೊಂಡು ಹುಣ್ಣಿಮೆಯ ದಿನ ಊರು ಬಿಡುತ್ತಾರೆ.  ಕೆಲವುಕಡೆ ಮದ್ಯರಾತ್ರಿ ಇನ್ನು ಕೆಲಕಡೆ ಹುಣ್ಣಿಮೆ ದಿನ‌ ಮುಂಜಾನೆ ಊರಿನ‌ ಪ್ರಮುಖರ ಮನೆಯಲ್ಲಿರುವ  ಕಂಬಿಗಳನ್ನು ಒಂದೆಡೆ ಸೇರಿಸುತ್ತಾರೆ. ಊರಿನ ‌ಜನ ಸೇರಿ ಕಂಬಿಗಳನ್ನು ಮತ್ತು ಪಾದಯಾತ್ರಿಗಳನ್ನು ಬಿಳ್ಕೊಟ್ಟು ರಂಗು ರಂಗಿನ‌ಬಣ್ಣ ಆಡಲು ಪ್ರಾರಂಬಿಸುತ್ತಾರೆ.
    ಕಾಖಂಡಕಿ ಗ್ರಾಮದ ಎಲ್ಲ ‌ಪಾದಯಾತ್ರಿಗಳು ಮತ್ತು ಮಲ್ಲಿಕಾರ್ಜುನನ ಭಕ್ತರು ಬೆಳ್ಳಿಯ ಕಂಬಿಯನ್ನು ಮಾಡಿಸಿರುದ್ದಾರೆ. ಅದನ್ನು ಚಿತ್ರದಲ್ಲಿ ಕಾಣಬಹುದು . ಮತ್ತು ಮನೆ ಮನೆ ತೆರೆಳಿ ದರ್ಶನ ನೀಡುವ ಕಂಬಿ ಚಿತ್ರ ಇಲ್ಲಿ ಕಾಣಬಹುದು.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಗುಡ್ಡಾಪುರ ಶ್ರೀ ದಾನಮ್ಮ ದೇವಿ