ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಚಿತ್ರ: ಮಲ್ಲಿಕಾರ್ಜುನ  ಸ್ವಾಮೀಜಿ
ಚಿತ್ರ : ಜ್ಞಾನಯೋಗಾಶ್ರಮದ ಪ್ರಣವಮಂಟಪ

ಪ್ರವಚನ ಮೂಲಕ ಜನರನ್ನು ಪರಿವರ್ತಿಸಿದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ
🙏🙏  

 ಅಜ್ಞಾನ ಅಳಿಸಿ ಸುಜ್ಞಾನದೆಡೆಗೆ ಕೊಂಡೊಯ್ಯುವ ಗುರುಗಳನ್ನು ನೆನೆಯುವ ಪರ್ವದಿನವೇ ಗುರುಪೌರ್ಣಿಮೆ. ಇದು ಎಲ್ಲ ಧರ್ಮದವರಿಗೂ ಪವಿತ್ರ. 
ಅಂತೆಯೇ ಪ್ರವಚನಗಳ ಮೂಲಕ ಭಕ್ತರ ಅಂಧಕಾರ ನೀಗಿಸಿ ಸುಜ್ಞಾನದೆಡೆಗೆ ದಾರಿ ತೋರಿದ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು  ಗುರುಪೌರ್ಣಿಮೆಯಂದು ಆರಾಧಿಸಲಾಗುತ್ತಿದೆ. 

⛳ಮನುಕುಲದ ಉದ್ಧಾರಕ:- ಯುಗಪುರುಷ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಬಾಲ್ಯದ ಹೆಸರು ಮುದುಕಪ್ಪ. ಇವರು 1903 ಅಗಸ್ಟ 15ರಂದು ಸವದತ್ತಿ ತಾಲೂಕಿನ ಹಂಚಿನಾಳದ ಚನ್ನವೀರಪ್ಪ ಮತ್ತು ನೀಲಮ್ಮ ದಂಪತಿಯ ಪವಿತ್ರ ಗರ್ಭದಲ್ಲಿ ಜನಿಸಿದರು. ತಾಯಿಯಿಂದ ಅಕ್ಷರಾಭ್ಯಾಸ ಮಾಡಿದ ಮುದುಕಪ್ಪ ಉತ್ತಮ ಕಂಠಸಿರಿ ಹೊಂದಿದ್ದರು. ಭಕ್ತಪ್ರಲ್ಹಾದ, ಶ್ರವಣಕುಮಾರ ಮತ್ತು ಅನೇಕ ಭಕ್ತಿ ಪ್ರಧಾನ ನಾಟಕಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದರು. 
     ಇವರ ಕಂಚಿನ ಕಂಠಕ್ಕೆ ತಲೆದೂಗಿದ ಗದುಗಿನ ಶಿವಾನಂದರು ತಮ್ಮ ಜ್ಞಾನ ಪ್ರಸಾರ ಕಾರ್ಯಕ್ಕೆ ಸೇರಿಸಿಕೊಂಡರು. ಮುದುಕಪ್ಪನಿಗೆ 1924ರಲ್ಲಿ ದೀಕ್ಷೆ ನೀಡಿದರು. ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳು ಮೀರಜನ  ಕಲ್ಲಪ್ಪ ಜಕಾತೆ ಅವರ ಮನೆಯಲ್ಲಿ ನಿಜಗುಣ ಶಾಸ್ತ್ರ ಪ್ರವಚನ ಪ್ರಾರಂಭ ಮಾಡಿದರು. ಅಲ್ಲಿಂದ 1984ರವರೆಗೆ ನಿರಂತರ ನಾಲ್ಕು ದಶಕ ಪ್ರವಚನಗಳ ಮೂಲಕ ಜನರನ್ನು ಉದ್ಧಾರ ಮಾಡಿದ್ದು ಅವರ ಪಾಂಡಿತ್ಯಕ್ಕೆ ಸಾಕ್ಷಿ. 

📚ಶೈಕ್ಷಣಿಕ ಕ್ರಾಂತಿ:🖋
        ಕರ್ನಾಟಕ, ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಹಳ್ಳಿಗಳಿಗೆ  ಸಂಚರಿಸಿ ಜ್ಞಾನದಾಸೋಹ ನೀಡಿದ್ದಾರೆ. ಪ್ರವಚನದ ಮೂಲಕ ಅಲ್ಲಿ ಸಂಗ್ರಹವಾದ ದೇಣಿಗೆಯನ್ನು ಅಲ್ಲಿನ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಬಳಿಸಿದ್ದಾರೆ. ಇದರಿಂದ ತಮ್ಮ ಪ್ರವಚನ ಜ್ಞಾನ ಪ್ರಸಾರ ಕಾರ್ಯಕ್ಕೆ ವಿಶೇಷ ಅರ್ಥ ಬರೆದರು. ಕಾಗವಾಡದ ಶಿವಾನಂದ ಶಾಲೆ, ಚಡಚಣದ ಸಂಗಮೇಶ್ವರ ಶಾಲೆ, ಬನಹಟ್ಟಿ ಮೀರಜ್ ಸೇರಿದಂತೆ ಹಲೆವೆಡೆ ಶಾಲೆಗಳ ಸ್ಥಾಪನೆಗೆ ಪಣ ತೊಟ್ಟರು ತಮಗೆ ಬಂದ ದೇಣಿಗೆ ಹಣವನ್ನು ಅದೇ ಹಳ್ಳಿಯ ಉದ್ದಾರಕ್ಕೆ ಉಪಯೋಗಿಸಿದ್ದಾರೆ. 

        🎙ಇವರ ಪ್ರವಚನ ಆಲಿಸಿದ ವಿಜಯಪುರದ ಆಗಿನ ಹಿರಿಯರು ಶ್ರೀಗಳನ್ನು ನಗರಕ್ಕೆ ಕರೆತಂದರು. ನಂತರ ಶ್ರೀಗಳು ಆಧ್ಯಾತ್ಮಿಕ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದರು. ಇಂದಿನ ಜ್ಞಾನಯೋಗಾಶ್ರಮ ಅಂದಿನ ಹಿರಿಯರೆಲ್ಲ ಆಧ್ಯಾತ್ಮಿಕ ಸಾಧಕರಿಗೆ ಆಶ್ರಯವಾಗಲೆಂದು ನಿರ್ಮಿಸಿದ್ದು.

👍⛳ಕರುನಾಡಿಗೆ ಕೊಡುಗೆ: 
ದೇಶ ವಿದೇಶಗಳಲ್ಲಿ ಪ್ರವಚನ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಜ್ಞಾನ ನೀಗಿಸುತ್ತಿರುವ  ನಡೆದಾಡುವ ದೇವರು, ವಿಶ್ವಸಂತ, ಸರಳ ಜೀವಿ ಶ್ರೀ ಸಿದ್ದೇಶ್ವರ ಸ್ವಾಮಿಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ.  ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು 1985 ಜುಲೈ 2 ರಂದು ಗುರುಪೌರ್ಣಿಮೆಯ ದಿನ ಲಿಂಗೈಕ್ಯರಾದರು.  
  
 📿ಗುರುಗಳ ಆರಾಧನೆಗೆ ಸಕಲ ಸಿದ್ದತೆ: ಪ್ರತಿವರ್ಷ ಗುರುಪೌರ್ಣಿಮೆಯ ದಿನ ಮಲ್ಲಿಕಾರ್ಜುನ ಸ್ವಾಮಿಗಳನ್ನು ಆರಾಧಿಸಲಾಗುತ್ತದೆ ಅಂದು ಅವರ ಸಾವಿರಾರು ಶಿಷ್ಯವೃಂದ ಆಶ್ರಮದತ್ತ ಬರುತ್ತಾರೆ. ಲಕ್ಷಾಂತರ ಜನ ಭಕ್ತರು ಭಕ್ತಿಯಲ್ಲಿ ಮಿಂದೆದ್ದು ಪಾವನರಾಗುತ್ತಾರೆ. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಸುಕಿನ‌ಜಾವ ಜಪಯಜ್ಞ ಮಹಾಪೂಜೆ ಮತ್ತು ಶ್ರೀಗಳ ಮಾಡಿದ ಪ್ರವಚನದ ದ್ವನಿಸುರಳಿಯನ್ನು ಪ್ರಸಾರ ಮಾಡುತ್ತಾರೆ. 

©ಆಕಾಶ ಅಶೋಕ ತಿಮಶೆಟ್ಟಿ, 8951001580






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ