ಗಣಪತಿ ಬಪ್ಪಾ ಮೊರಯಾ

             ಸಾಲು ಸಾಲು ಹಬ್ಬಗಳು ಬಂದರೆ‌ ಸಾಕು ಮನೆಮಂದಿಯೆಲ್ಲ  ಗರಿ ಗರಿಯ ಬಟ್ಟೆ ತೊಟ್ಟು ಶಿಸ್ತಿನ ಶಿಪಾಯಿಗಳಂತೆ ಮನ ತುಂಬಿ ಹುರುಪಿನಿಂದ ಒಡಾಡುತ್ತೇವೆ, ಅಂದು ಮನೆಯಲ್ಲಿ ಸಿಹಿ ತಿಂಡಿ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತೇವೆ. ಗಣೇಶನ ಹಬ್ಬ ಪ್ರಮುಖ ಹಬ್ಬಗಳಲ್ಲಿ ಒಂದು, ಅಂದು ನಮ್ಮ ಮನೆಗೆ ಬರುವ ಅತಿಥಿಯನ್ನು ಬರಮಾಡಿಕೊಳ್ಳಲು ಬರದ ಸಿದ್ದತೆ ಮಾಡಿಕೊಂಡಿರುತ್ತೆವೆ. ನಾನು ಚಿಕ್ಕವನಿದ್ದಾಗಿನಿಂದಲೂ  ಈ ಸಂಸ್ಕೃತಿಯಲ್ಲಿ  ಬೆಳೆದ ಹುಡುಗ ಹಾಗಾಗಿ ಸಂಪ್ರದಾಯ ಆಚಾರಗಳ ಬಗ್ಗೆ ಅತೀವ  ಆಸಕ್ತಿ.
          ಐದು ದಿನ ನಾನು ಶಾಲೆ ಬಿಟ್ಟರು ಸರಿ ಗಣೇಶನಿಗೆ ಏನೂ ಕೊರತೆ ಮಾಡುತ್ತಿರಲಿಲ್ಲ. ಮನೆ ಪೂರ್ವಾಭಿಮುಖವಾದ ಒಂದು ಜಾಗ ಗಣೇಶನಿಗೆಂದೆ ಮೀಸಲು ಅಲ್ಲಿ  ಲಂಬೋದರನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಮನೆಗೆ ಗಣೇಶನನ್ನು ಅದ್ದೂರಿಯಿಂದ ಬರಮಾಡಿಕೊಂಡು ಅದರಂತೆ ಸಂಪ್ರದಾಯಿಕವಾಗಿ ಬಿಳ್ಕೋಡುತ್ತೇವೆ...
        ನಾವು ನಮ್ಮ ಶಾಲೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರಿಂದ ಅದರ ಮುಂದಾಳತ್ವವನ್ನು ನಾನು ವಹಿಸಿಕೊಳ್ಳುತ್ತಿದ್ದೇ. ಪ್ರೌಡ ಶಾಲೆಯಲ್ಲಿ ಕಲಿಯುವ ವೇಳೆ  ಗಣೇಶನ ಹಬ್ಬಕ್ಕೂ ಒಂದು ವಾರ ಮುಂಚೆ ಹಬ್ಬಕ್ಜೆ ತಯಾರಿ ನಡೆಸಿದೆವು, ಮುಖ್ಯಗುರುಗಳು ಒಬ್ಬ ವಿದ್ಯಾರ್ಥಿ 2೦ ರೂಪಾಯಿ ನೀಡಬೇಕೆಂದು  ತಿಳಿಸಿ. ತರಗತಿವಾರು ಹಣ ಸಂಗ್ರಣೆಗೆ ಆಯಾ ತರಗತಿಯ ಒಬ್ಬ ವಿದ್ಯಾರ್ಥಿಗೆ ಜವಾದ್ಬಾರಿ ನಿಡುತ್ತಿದ್ರು.  
     ಒಟ್ಟಾರೆ ಎಲ್ಲ ಹಣವನ್ನು ಒಂದೆಡೆ ಸೇರಿಸಿ ಗಣೇಶ ಮೂರ್ತಿ ಮತ್ತು ಪಟಾಕಿ ಗಳ ಖರೀದಿಗೆ ವಿಜಯಪುರಕ್ಕೆ ಹೋಗುತ್ತಿದ್ದೆವು. ಎಲ್ಲ ಗೆಳೆಯರು ಸೇರಿ ಲೇಜಿಮ್ ಮತ್ತು ಡ್ರಮ್ ಸೆಟ್ ಬಾರಿಸುತ್ತ "ಗಣಪತಿ ಬಪ್ಪಾ ಮೊರಯಾ" ಘೊಷಗಳನ್ನು ಕೂಗಿ ಗ್ರಾಮದ ಪ್ರಮುಖ ಬೀದಿ ಸುತ್ತಿ ಕೊನೆಗೆ ಹೈಸ್ಕೂಲಿನ ಅಂಗಳ ತಲುತ್ತಿದ್ದೇವೆ. ಅದರೆ ಅಲ್ಯಾವ ಢಿಜೆ ಎಂಬ ಝಲಕ್ ಇರಲಿಲ್ಲ
    ಮೊದಲೆ ನಿರ್ಮಿಸಿದ ಮಂಟಪದಲ್ಲಿ ವಿನಾಯಕನನ್ನು ಕೂಡಿಸಿ ಹೂ ಹಣ್ಣು ನೈವೆದ್ಯ ಅರ್ಪಿಸಿ. ೫ ದಿನಗಳ ಕಾಲ ಅವನೊಂದಿಗಿದ್ದು ಶೃದ್ದಾ ಭಕ್ತಿಯಿಂದ ಸೇವೆ ಸಲ್ಲಿಸುತ್ತಿದ್ದೆವು.
ಮೊಜಿನ ಆಟಗಳನ್ನು ಆಡಿ ಗೆದ್ದವರಿಗೆ ಬಹುಮಾನ ನೀಡಿ ೫ನೇ ದಿನ ಸೂರ್ಯಾಸ್ತಕ್ಕೂ ಮುನ್ನ ಗಣೇಶನನ್ನು  ವಿಸರ್ಜನೆ ಮಾಡುತ್ತಿದ್ದೆವು.
      ಈ ಕೆಲಸದಲ್ಲಿ ತೃಪ್ತಿ ಇತ್ತು ಭಕ್ತಿ ಇತ್ತು, ಆದರೆ ನಗರಕ್ಕೆ ಕಾಲಿಟ್ಟುಡನೆ ಹಬ್ಬದ ವಾತಾವರಣವೇ ಬದಲಾಯಿತು.
ಮಂಗಳಾರತಿ, ಭಕ್ತಿಗೀತೆಯ ಬದಲಿಗೆ ಗಣೇಶನ ಮಂಟಪದಲ್ಲಿ ಸಿನಿಮಾ ಸಂಗೀತ ಹೆಚ್ಚಾಗಿ ಕೇಳುತ್ತವೆ, ಡೋಳ್ಳು ಕುಣಿತ ಕರಡಿ ಮಜಲು ಬದಲಾಗಿ ನಿದ್ದೆಗೆಡೆಸುವ DJ ಶಬ್ದ ಕೇಳುತ್ತದೆ. ಭಕ್ತಿ ಬೆಸೆಯ ಬೇಕಿದ್ದ ಕೇಂದ್ರಗಳು ಇಂದು ಹಣ ವಸೂಲಿ ಮಾಡುವ ಕೇಂದ್ರಗಳಾಗಿವೆ.

    ಸಾರ್ವಜನಿಕ ಗಣೇಶ ನನ್ನು ನೋಡಿದಾಗ ಖುಷಿ ಆಗುತ್ತದೆ ಅದಕ್ಕೆ ಕಾರಣ ಅಲ್ಲಿನ ಯುವಕರು, ನನ್ನ ಸ್ನೇಹಿತರು ಎಲ್ಲ ಸೇರಿ ಬಡಾವಣೆಯ/ಕಾಲೋನಿಯ ಗಣೇಶನನ್ನು ಪ್ರತಿಷ್ಠಾಪಿಸಿ ಅಲ್ಲಿ ಪ್ರಸಾದ ಪೂಜೆ ಎಲ್ಲ‌ಕೆಲಸಗಳನ್ನು ಮಾಡುತ್ತ ಧರ್ಮದ ಕೆಲಸದಲ್ಲಿ ತಲ್ಲಿನರಾಗಿರುತ್ತಾರೆ. ಇಂದು ನಾನು ನೋಡುತ್ತಿರುವ ಈ ದೃಷ್ಯ ಅಂದು ತಿಲಕರು ಕೊಟ್ಟ ಉಡುಗೊರೆ. ಸ್ವಾತಂತ್ರ್ಯ ಹೊರಾಟಗಾರರಲ್ಲಿ ಪ್ರಮುಖ ರಾದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪಿಸಿ ಅದರೊಟ್ಟಿಗೆ ಆಂಗ್ಲರ ವಿರುದ್ದ ಹೋರಾಡಲು ಈ ಪುಣ್ಯಭೂಮಿಯ ಪುತ್ರರನ್ನು ಒಂದೆಡೆ ಸೇರಿಸಿದರು.
      ಸ್ವಾಮಿ ವಿವೇಕಾನಂದ ರು ಬಯಸಿದ ಗಟ್ಟಿ ಹೃದಯದ ಯುವಕರು ಮತ್ತು ತಿಲಕರಿಗೆ ಬೇಕಾದ ಸಂಘಟನೆ ಸಿಕ್ಕಿದ್ದು ಈ ಮೂಲಕವೆ‌. ............
..                             ಮುಂದುವರೆಯುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ