ಪೇಪರ್ ಪೇಪರ್

          ಎಲ್ಲಿ ನೋಡಿದತ್ತ ಬಿಡದೆ ಸುರಿಯುತ್ತಿರುವ ಮಳೆಹನಿ, ತೂರಿಕೊಂಡು ಹೋಗುವ ಗಾಳಿ ಇದರ ನಡುವೆ ಕೆಟ್ಟ್ ರಸ್ತೆಯಲ್ಲಿ ಸೈಕಲ್ ಪೆಡೆಲ್ ‌ತುಳಿದು. ಮನೆ  ಮನೆಗೆ ಪೆಪರ್ ಹಾಕುವ ಹುಡುಗ, ತನ್ನ ದೇಹಕ್ಕಿಂತ‌ ತಾನು ತಂದ ಪತ್ರಿಕೆಗಳ ಜವಾದ್ಬಾರಿ ಹೆಚ್ಚಿನದು, ಪೆಪರ್ ಹಾಕುವ ವೇಳೆ ಹದಿನೈದು ನಿಮಿಷ ತಡವಾದರೆ. ಆ ಮನೆಯ ಮಾಲೀಕ ಏನು ಅಂದಾನು ಎನ್ನುವ ತವಕ.
          ಇಂದಿನ ಬದುಕಿಗಾಗಿ ನಾಳೆಯ ಕನಸುಗಳಿಗಾಗಿ ದುಡಿಯುವ ಈ ಹುಡುಗರು, ತನ್ನ ಸಂತೋಷಕ್ಕೆ ಸಣ್ಣಗೆ ಸಿನಿಮಾ ಹಾಡು ಹಾಕಿ ಜೆಬಿನಲ್ಲಿ ಪೊನ್ ಇಟ್ಟು ಪೆಡಲ್ ಮೇಲೆ ಕಾಲಿಟ್ಟು ಮನ್ನಡೆಯುತ್ತಾನೆ.
            ಈ ಬದುಕೆ ಹಾಗೆ  ವ್ಯವಸ್ಥಿತವಾದ ಬದುಕಿಗೆ  ಅತಿ ಆಸೆ ಪಡುವುದಲ್ಲ, ಓದಿಗಾಗಿ ಹಣ ಬೇಕು, ಹಸಿವು ನೀಗಿಸಲು ಹಣ ಬೇಕು, ಪಾಕೆಟ್ ನೀರಿಗೆ ಹಣ ಪಡೆಯೊ ಈ ಪ್ರಪಂಚದಲ್ಲಿ ಹಣ ಒಂದಿದ್ದರೆ ಸಾಕು ನಾಳೆಯನ್ನು ಕೊಂಡುಕೊಳ್ಳಬಹುದು ಎಂಬ ಬ್ರಮೆಯಲ್ಲಿದ್ದಾರೆ ಕೆಲವರು, ಆದರೆ ಅದರ ಒಳ ತಿರುವು ಅರಿತವರು, ಅನುಭವಿಸಿದರು ಮಾತ್ರ. ಬದುಕಿನ ಸೂತ್ರಗಳು ಗಳನ್ನು ಎಳೆ ಎಳೆಯಾಗಿ ಅನುಸರಿಸಿ ಯಶಸ್ಸು ಸಾದಿಸಿದ ಮಾಹಾನ್ ವ್ಯಕ್ತಿಗಳು ಕಷ್ಟದ ಸಂಕೋಲೆಯಲ್ಲಿ ಸಿಕ್ಕಿ ಒದ್ದಾಡಿದ್ದಾರೆ. ಪೆಪರ್ ಮಾರಿ ಒಂಡಿಷ್ಟು ಕಾಸು ಸಂಪಾದಿಸಿ ಅದೆ ಹಣದಿಂದ ಪುಸ್ತಕ ಅಥವಾ ಆಅಲೆ ಪೀಸ್ ಭರಿಸಿ ಮುಂದೊಂದು ದಿನ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಎಂಬ ಪಟ್ಟ ಗಿಟ್ಟಿಸಿಕೊಂಡು ಸಂತೋಷ ವಾಗಿದ್ದಾರೆ. ಅವರಿ ಇಂದಿನ ಸಂತೋಷ ಅಂದು ಅವರು ತುಳಿದ ಸೈಕಲ್ ವೇಗವನ್ನೂ ಮೀರಿದ್ದು. ಇದಕ್ಕೊಂದು ಉತ್ತಮ ಉದಾಹರಣೆ ನೆನಪಿಸದಿದ್ದರೆ ಈ ನನ್ನ ಬರಹಕ್ಕೆ ಮರ್ಯಾದೆ  ಇರುವುದಿಲ್ಲ,,
    ‌‌‌‌     ‌‌‌‌ ನಮ್ಮ ದೇಶದ ಮಾಜಿ ರಾಷ್ಟ್ರಪತಿ, ವಿಶ್ವದ ಶ್ರೇಷ್ಠ ವಿಜ್ಞಾನಿ ಡಾ|| ಎ ಪಿ ಜೆ ಅಬ್ದುಲ್ ಕಲಾಮ್ ಅವರು ಕೂಡಾ ತಮ್ಮ ಬಾಲ್ಯದಲ್ಲಿ ಪತ್ರಿಕೆಗಾಗಿ ರೈಲ್ ನ ದಾರಿ ಕಾದಿದ್ದಾರೆ, ಹೊಂದಿಸಿಕೊಂದು ಅದೆಷ್ಟೊ ಜನರ ಮನೆ ತಲಿಪಿಸಿದ್ದಾರೆ ಅವರ ಮುಂದೆ ಸಾದಿಸಿದ್ದ ಇಡೀ ಪ್ರಪಂಚ ಅವರನ್ನ ಅಪ್ಪಿ ಒಪ್ಪಿಕೊಂಡಿದ್ದು ಅವರ ಸಾದನೆಗಳನ್ನು !,
ಆ ಸಾಧನೆ ದಡ ಸೇರಲು  ಅವರು ಅದೆಷ್ಟು ಉದ್ಧ ಆಳವಾದ ಸಮುದ್ರಕ್ಕೆ ಇಳಿದಿದ್ದರು ಎನ್ನುವದನ್ನು ಅವರು ಪುಸ್ತಕದಲ್ಲಿ ಅವರು ಬರೆದ ಘಟನೆಗಳೆ ಸಾಕ್ಷಿ.
            ಜನ ಜೀವನ ಬದಲಾದಂತೆ ಪತ್ರಿಕೋದ್ಯಮ ಕೂಡಾ ಬದಲಾಗಿದೆ. ಅದಕ್ಕೆ ತಕ್ಕಂತ ಯಂತ್ರಗಳು, ವಿಷಯ ಕ್ರೀಯಾಶೀಲತೆ ಬದಲಾವಣೆ ಯಾಗುತ್ತ ಹೊರಟಿದೆ. ಓದುಗರ ಅಭಿರುಚಿಗೆ ಹೊಂದಾಣಿಸಿಕೊಂಡು ವಿನ್ಯಾಸಕ್ಕೆ ವೈಯಾರಕ್ಕೆ ಮಹತ್ವ ಕೊಟ್ಟಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ