ಶರಣ ಭಾವ, ಸರಳ ಜೀವ ಶ್ರೀ ಬಿ ಎಂ‌ ಪಾಟೀಲ


ಹಲವು ವೈವಿದ್ಯಗಳ ಬೀಡು ವಿಜಯಪುರ ತಾಲೂಕು ೫ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಈ ಬಾರಿಯ ಸಮ್ಮೇಳನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ನಡೆಸಲು ಸಕಲ‌ಸಿದ್ದತೆಗಳು ಭರದಿಂದ ಸಾಗಿದೆ. ರಾಷ್ಟ್ರ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಕ್ರೀಯಾಶೀಲ ಸಾಹಿತಿ ಶ್ರೀ ಬಿ ಎಂ ಪಾಟೀಲ ಅವರನ್ನು ಸರ್ವಾದ್ಯಕ್ಷರಾನ್ನಾಗಿ ಆಯ್ಕೆ ಮಾಡಲಾಗಿದೆ.
         ಮನಗೂಳಿಯ ಶ್ರೀ ಬಿ ಎಂ ಪಾಟೀಲರು ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಮಾಡಿದ ತಪಸ್ಸು ಬಹಳಷ್ಟು. ಹಲವಾರು ರಚನಾತ್ಮಕ ಚಟುವಟಿಕೆಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಸಾಹಿತ್ಯೀಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಲವಾರು ಆಯಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಕರಾಗಿ 33ವರ್ಷ ಸೇವೆ 
ಗ್ರಾಮೀಣ ಬದುಕನ್ನು ಹೆಚ್ಚು ಪ್ರೀತಿಸುವ ಇವರು ತಮ್ಮ ವೃತ್ತಿ ಜೀವನದಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಜಾಗೃತಗೊಳಿಸಲು ಮೊಗ್ಗು, ಬೆಳಕು, ಸಂಪಿಗೆ, ಮಲ್ಲಿಗೆ, ಸೌರಭ, ಸಿರಿಗನ್ನಡ ಸೇರಿದಂತೆ ಹಲವಾರು ಹಸ್ತಪ್ರತಿಗಳನ್ನು ಸಿದ್ದಪಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮ ಬರೆದಿದ್ದಾರೆ. ಇದರಿಂದ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಆಸಕ್ತಿ ತುಂಬಿದ್ದಾರೆ.
ಕೃತಿಗಳು
ಮಕ್ಕಳ ನಾಟಕ, ಸಾಮಾಜಿಕ ನಾಟಕ, ಕವಮ ಸಂಕಲನ, ಕಥೆ ಮತ್ತು ಹಲವಾರು ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ನಾಟಕಗಳನ್ನು ಬರೆದು ಸ್ವತಃ ನಿರ್ದೇಶನ ಮಾಡಿದ್ದಾರೆ. ಮನಗೂಳಿ‌ ಮಹಾಂತ ಶಿವಯೋಗಿ, ಗಿರಿನವಿಲು, ಸುಖದ ದಾಗಿ, ಬೆಳಕು ಕಂಡ ಬಾಳು, ಶಾಹಿಕಾಲದ ಪಂಚಸಾದಕರು, ತಪೋಬೂಷಣ, ರಾಷ್ಟ್ರ ಪಕ್ಷಿ ಕೃತಿಗಳನ್ನು ರಚಿಸಿದ್ದಾರೆ.

ಸಾಹಿತ್ಯ ಪರಿಷತ್ ನೊಂದಿಗಿ‌ನ ನಂಟು. 
ವೃತ್ತಿ ಜೀವನದ ಬಿಡುವಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ನೊಂದಿಗೆ ಹೆಚ್ಚಿನ‌ನಂಟು ಹೊಂದಿದ್ದ ಇವರು ಬ.ಬಾಗೇವಾಡಿಯ ತಾಲೂಕಾ ಕನ್ನಡ ಸಾಹಿತ್ಯ ಪತಿಷತ್ತ ಅದ್ಯಕ್ಷರಾಗಿ ಮತ್ತು ವಿಜಯಪುತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಶಾಲೆಗೊಂದು ಸಾಹಿತ್ಯ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದರು. ಪರಿಷತ್ತಿಗೆ ಒಂದು ಸ್ವಂತ ಕಟ್ಟಡ ಇವರ ಪ್ರಯತ್ನ ಮತ್ತ ಕನ್ನಡ ಪರ ಶ್ರಮಕ್ಕೆ ಹಿಡಿದ ಕೈಗನ್ನಡಿ. ಹಲಾವಾರು ಕಡೆಗಳಲ್ಲಿ ಸಮ್ಮೇಳನ ನಡೆಸಿದ್ದಾರೆ. 
ಅರಸಿ ಬಂದ ಪ್ರಶಸ್ತಿಗಳು 

ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ರೀಯಾಶೀಲ ಕನ್ನಡ ಕೆಲಸಕ್ಕಾಗಿ "ಕನ್ನಡ ಶ್ರಿ" ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಪ್ರಿತ್ಯದಾರದಿಂದ ಗೌರವಿಸಿವೆ. ಅನೇಕ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಶರಣಸಾಹಿತ್ಯ ಮತ್ತು ಗಮಕ ಸಾಹಿತ್ಯ 
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಮಾಡಿದ ಇವರು ಊರಿಂದೂರಿಗೆ ಶರಣ ಸಾಹಿತ್ಯ ಎಂಬ ಮಹತ್ವಪೂರ್ಣ ಕಾರ್ಯಕ್ರಮ ಮಾಡಿದ್ದಾರೆ.
     77ರ ವಯಸ್ಸಿನಲ್ಲು ಸೂರ್ತಿಯ ಚಿಲುಮೆ ಯಾಗಿ ನಮ್ಮೊಡನೆ ದನಿವರಿಯದೆ ಯುವಕರನ್ನು ನಾಚಿಸುವಂತೆ ಕನ್ನಡ ಪರ ಮತ್ತು ಶರಣ ಸಾಹಿತ್ಯ ಮತ್ತು ಗಮಕ ಸಾಹಿತ್ಯ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಶರಣರ ವಚನಗಳನ್ನು ಮುಕ್ತಕಂಠದಿಂದ ಹಾರುವ ಇವರು ಶರಣರ ತತ್ವ ಸಂದೇಶದಂತೆ ಬಾಳುತಿದ್ದಾರೆ. ಸದ್ಯ ರಾಜ್ಯ ಗಮಕ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಘಟಕದ ಅದ್ಯಕ್ಷರಾಗಿರುವ ಇವರು ಗಮಕ ಕಲೆಯ ಪ್ರಸಾರದದಲ್ಲಿ ಶ್ರಮಿಸುತ್ತಿದ್ದಾರೆ  
                                                   ಇವ ನಿಮ್ಮವ.....
               ‌                                   ಆಕಾಶ ತಿಮಶೆಟ್ಟಿ



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ