ಗುಡ್ಡಾಪುರ ಶ್ರೀ ದಾನಮ್ಮ ದೇವಿ




ವಿಶ್ವದಲ್ಲಿ ಶಾಂತಿ ಅಶಾಂತಿಗಳ ಧರ್ಮ ಅಧರ್ಮ ಸಂಘರ್ಷ ನಡೆದಾಗ ಸುಳ್ಳು ಸತ್ಯದ ಮೇಲೆ ಮೆರೆದಾಡುತ್ತಿರುವಾಗ ಮನುಕುಲದ ಉದ್ದಾರಕ್ಕಾಗಿ ಧರೆಗೆ ಅವತರಿಸಿ ಸಾದಾರಣ ಜೀವನದಲ್ಲಿ ಸುದಾರಣೆ ತಂದು ನಾಡಿನ ಜನರ ಅಜ್ಞಾನ ಅಳಿಸಿ ಸುಜ್ಞಾನ ತೋರಿದ ಮಹಾನ್ ಶರಣ ಸಂತ ಮಹಾ ತಪಸ್ವಿಗಳ ನಾಡು ನಮ್ಮದು. ಇವರ ಸಾಲಿನಲ್ಲಿ ಬರುವ 12 ನೇ ಶತಮಾನದ ಶ್ರೀ ದಾನಮ್ಮದೇವಿ ತಮ್ಮ ದಾನ ಧರ್ಮ ದಿಂದ  ಕೋಟ್ಯಂತರ ಜನರ ಅಮ್ಮನಾಗಿ ಗುಡ್ಡಾಪುರದಲ್ಲಿ ನೆಲೆಸಿದ್ದಾರೆ.
       ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಪಂಚಾಳ ಮನೆತನದ ಶ್ರೀ ವೀರಭದ್ರನ ಪರಮ ಭಕ್ತರಾದ ಅನಂತರಾಯ ಮತ್ತು ಶಿರಸಮ್ಮ ದಂಪತಿಗೆ ಬಹಾಲ ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಕೊರಗೂ ಇರುತ್ತದೆ. ದಂಪತಿಗಳು ವೀರಭದ್ರನನ್ನು ಬೆಡಿಕೊಳ್ಳಲಾಗಿ ಸ್ವಪ್ನದಲ್ಲಿ ಬಂದು ಆಶೀರ್ವಾದ ಮಾಡಿದ ನವಮಾಸ ಕಳೆದ ನಂತರ ಶಿರಸಮ್ಮ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನಲ್ಲಿನ ಅಮೋಘ ಪ್ರಜ್ವಲತೆ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ.   ಮಗು ಹಾಲು ಕುಡಿಯದಾದಾಗ ಒಂದು ಚಿಂತೆ ಶುರುವಾಗಿ ಬಿಡುತ್ತದೆ. ಜಂಗಮರ ಆದೇಶದಂತೆ ಜನನದಿಂದ ಹದಿಮೂರನೇ ದಿನಕ್ಕೆ ಮಂಗಲ ಗೀತೆ ಹಾಡುತ್ತ ಲಿಂಗದಾರಣೆ ಮಾಡುತ್ತಿದ್ದಂತೆ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಎಲ್ಲರೂ ಸೇರಿ ಮಗುವಿಗೆ ಲಿಂಗಮ್ಮ ಎಂದು ನಾಮಕರಣ ಮಾಡುತ್ತಾರೆ. ತಂದೆ    ತಾಯಿಯರ ಲಿಂಗಪೂಜೆ ಶಿವಶರಣರ ಕಥೆ ಕೇಳಿ ಪ್ರೇತಿತಲಾದ ಲಿಂಗಮ್ಮ ಕಲ್ಯಾಣದಲ್ಲಿರುವ ಶರಣರನ್ನು ಕಾಣಬೇಕೆಂದು ಕಲ್ಯಾಣದೆಡೆಗೆ ಪ್ರಯಾಣಿಸುತ್ತಾಳೆ.

ಕಲ್ಯಾಣಕ್ಕೆ ಲಿಂಗಮ್ಮ ಪ್ರಯಾಣ - ಲಿಂಗಮ್ಮ ಕಲ್ಯಾಣ ಸಮೀಪದ ಬಿಲ್ವವನದಲ್ಲಿ 21 ದಿನಗಳ ಕಾಲ ಶಿವಯೋಗಾರೂಡಳಾಗುತ್ತಾಳೆ. ಬಡದ ದೀನರಸೇವೆಮಾಡುತ್ತ ಜಾಲ ಕಳೆಯುತ್ತಲೆ ಕಲ್ಯಾಣದಲ್ಲಿ ಮನೆಮಾತಾಗುತ್ತಾಳೆ. ಬಸವಣ್ಣ ನವರು ಇವರ ಕಾಯಕ ವಿಕ್ಷಿಸಿ ಬೆರಗಾಗಿ ಸಂತೋಷ ಪಡುತ್ತಾರೆ. ಬಸವಣ್ಣನವರ ಮಹಾಮನೆ ಪ್ರವೇಶಿಸಿ ಲಿಂಗಪೂಜೆಯೋಂದಿಗೆ ನಿತ್ಯ ಜಂಗಮರ ಸೇವೆ ಮಾಡುತ್ತ ಕಾಯಕ ದಾಸೋಹ ದಲ್ಲೆ ಪರಮಾತ್ಮನನ್ನು ಕಾಣುತ್ತಾಳೆ.  ಈ ಎಲ್ಲ ಕಾಯಕ ದಾಸೋಹ ನೋಡಿದ ಬಸವೇಶ್ವರ ನೀನು ಕೇವಲ ಲಿಂಗಮ್ಮ ಅಲ್ಲ ದಾನ ಸ್ವರೂಪಿ. ದಾನ ದಾಸೋಹಿ. ದಾನೇಶ್ವರಿ ಎಂದು ಕೂಗಿ ಹೇಳುತ್ತಾರೆ. ಅಂದಿನಿಂದ ಈ ಲೋಕಕ್ಕೆ ದಾನ ದಾಸೋಹಿ ದಾನಮ್ಮ ದೇವಿ ಈ ಲೋಕಕ್ಕೆ ಪರಿಚಯಲಾಗುತ್ತಾಳೆ.

ಕಲ್ಯಾಣದಿಂದ ಮತ್ತೆ ಉಮರಾಣಿಗೆ :-  ಅಲ್ಲಿ ಕಲ್ಯಾಣದಲ್ಲಿ ದಾನಮ್ಮಳಾದ ಲಿಂಗಮ್ಮ ತವರಿಗೆ ಬರುತ್ತಿದ್ದಂತೆ ಎಲ್ಲಲ್ಲೂ ಸಂಭ್ರಮ ಮನೆಮಾಡುತ್ತದೆ. ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ. ಕಲ್ಯಾಣದಿಂದ ಮರಳಿ ಬಂದ ದಾನಮ್ಮ ವಿವಾಹಕ್ಕೆ ಸಮ್ಮತಿ ಸೂಚಿಸುತ್ತಾಳೆ.
ಶಂಕುತೀರ್ಥ ದಲ್ಲಿ ದೇವಿಯ ವಿವಾಹ :-  
ದಾನಮ್ಮ ದೇವಿ ತನ್ನೋಡನೆ 551 ನವಜೋಡಿಗಳ ವಿವಾಹ ಆಗುತ್ತದೆ. ಇಂದಿನ ದೇವಿಯ ಮದುವೆಯಾದ ಸ್ಥಳ ಅಪಾರ ಭಕ್ತರ ಶೃದ್ದಾಕೇಂದ್ರ ಇಲ್ಲಿ ಇರುವ ಎಂದೂ ಬತ್ತದ    ನೀರಿನ ಹೋಂಡ ಅಮ್ಮನ ಪವಾಡಕ್ಕೆ ಸಾಕ್ಷಿ.

   ಥರನ್ನು ವಿವಾಹವಾಗಿ ದಂಪತಿಗಳು ಇಬ್ಬರೂ ದೇಶ ಸಂಚಾರಕ್ಕೆ ಅಣಿಯಾಗುತ್ತಾರೆ.
ಸೊಲ್ಲಾಪುರ ದಲ್ಲಿ ಸಿದ್ದರಾಮರನ್ನು ಭೇಟಿಯಾಗಿ 66 ಶಿವಲಿಂಗ ಸ್ಥಾಪಿಸುತ್ತಾರೆ. ದೇಶ ಸಂಚಾರ ಗೈಯುತ್ತ‌ ತಾಯಿ ಗುಡ್ಡಾಪುರಕ್ಕೆ ಬಂದು ನೆಲೆಸುತ್ತಾಳೆ. ತ್ರಿಕಾಲ ಲಿಂಗಪೂಜೆ ಮಾಡುತ್ತ ಸದಾ ಕಾಯಕ ದಾಸೋಹ ಧರ್ಮ ಜಾಗೃತಿ ಮಾಡುತ್ತ ಮನುಕುಲ‌ ಉದ್ದಾರ  ಮಾಡುತ್ತಾಳೆ.
ಗುರುವಾರದ ಲಿಂಗಪೂಜೆಯ ವೇಳೆ ತನ್ನ ಅವತಾರ ಸಮಾಪ್ತಿ ಮಾಡುವದಾಗಿ ತನ್ನ ಆಶೀರ್ವಾದಿಂದ ಜನಿಸಿದ ಅಡಿಗಲ್ಲೇಶನ ಮುಂದೆ ಹೇಳುತ್ತಾಳೆ. ಗುರುವಾರ ಸೂರ್ಯಾಸ್ತದ ಸಮಯದಲ್ಲಿ ಲಿಂಗಪೂಜೆಯ ವೇಳೆ ತಾಯಿ ಲಿಂಗೈಕ್ಯಳಾಗುತ್ತಾಳೆ

ತಾಯಿಗೆ ತ್ರೀಕಾಲ ಪೂಜೆ 

   ದೇವಸ್ಥಾನದಲ್ಲಿ ಪ್ರತಿದಿನ‌ ದೇವಿಗೆ ತ್ರಿಕಾಲ ಪೂಜೆ ಮಾಡಲಾಗುತ್ತದೆ. ನಸುಕಿನ ಜಾವ ಬಾಲ್ಯವಸ್ಥೆಯಲ್ಲಿ ಹೂವಿನ‌ ಅಲಂಕಾರ, ಮಧ್ಯಾಹ್ನ ಯವತಿಯ ಅಲಂಕಾರ ರಾತ್ರಿವೇಳೆ ಮುಪ್ಪಾವಸ್ಥೆಯ ಅಲಂಕಾರ  ಶತಮಾನಗಳಿಂದಲೂ ಮಾಡಲಾಗುತ್ತಿದೆ. 
 ಈ ದೇವಸ್ಥಾನದಲ್ಲಿ ನಿತ್ಯ ಅನ್ನ ಪ್ರಸಾದ ವಿರುತ್ತದೆ ದಾನ ಅನ್ನ ದಾಸೋಹ ನಡೆಯುತ್ತದೆ 
 ಇದು ಭಕ್ತರ ದೇವಾಲಯ : ಇಷ್ಟು ದಿನಗಳಿಂದ ಇಲ್ಲಿ ಅಭಿವೃದ್ಧಿ ಆಗಿದ್ದು ಅದು ಭಕ್ತರ ದೇಣಿಗೆ ಇಂದ ಮಾತ್ರ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿರುವ ದೇವಾಲಯ ಸರ್ಕಾರಗಳ ಕಣ್ಣಾಮುಚ್ಚಾಲೆಯಿಂದ ವಂಚಿತ ವಾಗಿದೆ. ಭಕ್ತರೆ ಮುಂದೆ ನಿಂತು ಮಾಡಿದ ಹಲವಾರು ಕಲ್ಯಾಣ ಮಂಟಪ ವಸತಿ ಸೌಕರ್ಯ ಮತ್ತು ಶಿಸ್ತಿನ ಮೂಲಭೂತ ಸೌಕರ್ಯ ಒದಗಿಸಲಾಗಿದೆ. 

ಪ್ರತಿವರ್ಷ ಛಟ್ಟಿ ಅಮವಾಸ್ಯೆ ಯಂದು ದಾನಮ್ಮ ದೇವಿಯ ಜಾತ್ರೆ ನಡೆಯುತ್ತದೆ ಮಹಾರಾಷ್ಟ್ರ ಆಂದ್ರ ಕರ್ನಾಟಕ ಲಕ್ಷಾಂತ ಭಕ್ತರು ಸೇರಿ ಉತ್ಸವ ಮಾಡುತ್ತಾರೆ.  ಬನ್ನಿ ಒಮ್ಮೆ ಗುಡ್ಡಾಪುರ ಸುತ್ತಿ ಬರೋಣ ತಾಯಿಯ ದರ್ಶನ ಪಡೆಯೋಣ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ