ರೈತರ ಸೀತನಿ ಪಾರ್ಟಿ

         ಚಳಿಯ ನಡುವೆ ಹೋಲದಲ್ಲಿ  ಎಳೆಯ ಜೋಳದ ಕಾಳುಗಳನ್ನು  ಹುರಿದು ಬಿಸಿ ಮಾಡಿ ತಿನ್ನುವುದರ ಮಜವೇ ಬೇರೆ. ಬೇಕೆಂದಾಗಲೆಲ್ಲ ಸಿಗುವ ಭಾಗ್ಯ ಮತ್ತು ಮಜ ಇದಲ್ಲ ಪ್ರಕೃತಿ ಕೊಟ್ಟಾಗ ಮಾನವರಾದ ನಾವು ಪ್ರಕೃತಿಗೆ ಕೃತಜ್ಞರಾಗಿ ಅನುಭವಿಸಿ ಸವಿಯಬೇಕಷ್ಟೆ.
     

       ಸಂಕ್ರಾಂತಿ ಹಬ್ಬದ ವೇಳೆಗೆ ನಮ್ಮ ರೈತರು ಫಸಲಿನ ‌ಸಂಭ್ರಮದಲ್ಲಿರುತ್ತಾರೆ. ಈ ವೇಳೆಗಾಗಲೇ ಬೆಳೆದ ಬೆಳೆ ಬೇಳೆದು ನಿಂತು ರಾಶಿ ಮಾಡಿ ಗಂಟು ಕಟ್ಟವ ಸಮಯ.
ಬೆಳೆ ಮತ್ತು ಪ್ರಕೃತಿ ನಡುವಿನ ಸಂಬಂಧ ರೈತರಿಗಷ್ಟೆ ಗೊತ್ತು ವರ್ತಮಾನಕ್ಕೆ ತಕ್ಕಂತೆ ಬೆಳೆ ಬೆಳೆದು ಫಸಲುಂಡು ಖುಷಿಯಾಗುತ್ತಾರೆ. ಬೆಳೆ ಬೆಳೆದು ರಾಶಿ ಮಾಡುವುದಷ್ಟೆ ಅಲ್ಲ ಅದನ್ನು ಆರಾಧಿಸುವುದು ಕೂಡ ಆತನ ಕರ್ತವ್ಯ ಎಂದು ನಂಬುತ್ತಾನೆ. ಈ ನಂಬುಗೆಗೆ ಪ್ರಕೃತಿ ದೇವಿ ಆತನ ಕೈ ಹಿಡಿಯುತ್ತಾಳೆ.
     ರಾಶಿ ಮಾಡುವ ಮುನ್ನ ಬೆಳೆಯನ್ನು ಗಮನಿಸಿ ಎಳೆಯ ಕಾಳಗಳನ್ನು ಹುರಿದು ತಮ್ಮ ಪರಿವಾರದೊಂದಿಗೆ ಸಣ್ಣದೊಂದು ಪಾರ್ಟಿಕೂಡಾ ರೈತ ಮಾಡುತ್ತಾನೆ. ಇದಕ್ಕೆ ಗ್ರಾಮೀಣ ಭಾಷೆಯಲ್ಲಿ ಸೀತನಿ ಎನ್ನುತ್ತಾರೆ. ಈ ಎಳೆಯ ಕಾಳುಗಳ  ಮಹತ್ವ ಗೊತ್ತಾದರೆ ನೀವು ಈ ಬೆಳೆಗೆ ಬೆಲೆ ಕಟ್ಟಿ ಕೊಂಡುಕೊಳ್ಳಲು ಸಾಲುಗಟ್ಟಿ ನಿಲ್ಲುತ್ತೀರಿ!!! ಅಷ್ಟು ಪೌಷ್ಠಿಕಾಂಶದ ಆಹಾರ ಈ ಸೀತನಿ ಸಿಗುವುದು ಪ್ರಕೃತಿದತ್ತ ಕೊಡುಗೆ.

   ‌‌      ಸಾಮಾನ್ಯವಾಗಿ ಈ ರೈತರ ಪಾರ್ಟಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಾಣಸಿಗುತ್ತವೆ. ರೈತರು ತಮ್ಮ ಹೊಲಕ್ಕೆ  ನೆಂಟರು ಸ್ನೇಹಿತರೊಂದಿಗೆ ಹೋಗಿ ಒಣಸೆಗಣಿಯ ಗುಂಪಿಗೆ ಬೆಂಕಿ ಹಚ್ಚಿ ಎಳೆಯ ಜೋಳದ ಕಾಳುಗಳನ್ನು ಸುಡುತ್ತಾರೆ ನಂತರ ಅವುಗಳನ್ನು ಸ್ಚಚ್ಛಗೋಳಿಸಿ ಹಂಚಿ ತಿಂದು ಸಂತಸ ಪಡುತ್ತಾರೆ. ಪರಿಸರದೊಂದಿಗೆ ಸಣ್ಣದೊಂದು ಪಾರ್ಟಿ ಮಾಡುತ್ತಾರೆ.
ಒಣಸಗಣಿಗೆ ಬೆಂಕಿ ಹಚ್ಚಿ ಜೋಳದ ಕಾಳುಗಳನ್ನು ಸುಡುವುದು ಮತ್ತು ಸುಟ್ಟ ಕಾಳನ್ನ ಬರಿಗೈಯಲ್ಲಿ ತಿಕ್ಕಿ ಸ್ವಚ್ಛ ಮಾಡುವುದು ಸಾಮಾನ್ಯ ಕೆಲಸವಲ್ಲ ಅದಕ್ಕೆ ನುರಿತ ಕಲೆ ಅರಿತಿರಬೇಕು.
ಸಾಮಾನ್ಯವಾಗಿ ಇದು ಸಾಯಂಕಾಲ ಮತ್ತು ರಾತ್ರಿಯ ಹೊತ್ತು ಚಳಿಯ ನಡುವೆ ತಿಂದರೆ ಬಹಳ ಮಜವಾಗಿರುತ್ತೆ.

ನೀವು ಈ ಪಾರ್ಟಿಯಲ್ಲಿ ಭಾಗವಹಿಸಿದ್ದೀರಾ?.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ