ನಿಜವಾಯ್ತು ಶಿವಯ್ಯ ಶ್ರೀಗಳ ಹೇಳಿಕೆ

              ಅಚ್ಚಿಕಡಿಯಿಂದ ಇಚ್ಚಿಕಡಿ ಇಚ್ಚಿಕಡಿಯಿಂದ ಅಚ್ಚಿಕಡಿ ಈ ಸಾಲಾ ಇಲೆಕ್ಷನ್ ಮಸ್ತ ಇರ್ತದ ನೀವೆಂದೂ ಇಂತಾ ಇಲೆಕ್ಷನ್ ನೋಡಿರಂಗಿಲ್ಲಾ ಮುಂದು ನೋಡಲ್ಲ ಹಂಗ ಲಟಿಪಿಟಿ ಕಟಿಪಿಟಿ ಐತಿ ಎಂದು ಶಿವಯ್ಯ ಶ್ರೀಗಳು ಹೇಳಿದ ಹೇಳಿಕೆ ಈಗ ಜಿಲ್ಲೆಯ ಜನರ ಬಾಯಲ್ಲಿ ಮತ್ತೆ ಗುನಗುತ್ತಿದೆ. ಅದಕ್ಕೆ ಕಾರಣ ಸದ್ಯದ ರಾಜಕೀಯ ವಾತಾವರಣ.

             ವಿಜಯಪುರ ಜಿಲ್ಲೆಯ ಕತಕನಹಳ್ಳಿ ಗ್ರಾಮ ಶ್ರೀ ಗುರು ಚಕ್ರವರ್ತಿ ಸದಾಶಿವ ಸ್ವಾಮಿಗಳ ಮಠದಿಂದ ಹೆಚ್ಚು ಜಾಗೃತ ಮತ್ತು ಭಕ್ತರ ಶೃದ್ದಾಕೇಂದ್ರವಾಗಿದೆ. ಇಲ್ಲಿನ ಪೀಠಾದ್ಯಕ್ಷರಾದ ಪೂಜ್ಯ ಶ್ರೀಶಿವಯ್ಯ ಶ್ರೀಗಳ ಶಿಸ್ತು ಭಕ್ತಿ, ಭಕ್ತರ ಆರೈಕೆ ಹಾರೈಕೆ ಮತ್ತು ಅವರಾಡುವ ಪ್ರತಿ ಮಾತು ಪ್ರಚಲಿತವಾಗುತ್ತಿರುವುದು ಈ ಕ್ಷೇತ್ರದ ಮಹಿಮೆ ಇನ್ನಷ್ಟು ಹೆಚ್ಚಿಸಿದೆ.

               ಪ್ರತಿವರ್ಷ ಯುಗಾರಂಭದ ಯುಗಾದಿಯ ಶುಭದಿನ ನಡೆಯುವ ಜಾತ್ರೆಕೂಡ ಬಹಳ ವೈಶಿಷ್ಟ್ಯ ಹೊಂದಿರುತ್ತದೆ.  ಅಂದು ಶಿವಯ್ಯ ಶ್ರೀಗಳು ಹೇಳುವ ಗುರುವಿನ ಅಂತಃಕರಣದ ನುಡಿಗಳು ಹೆಚ್ಚು ಮಹತ್ವ ಪಡೆಯುತ್ತವೆ. ಜಿಲ್ಲೆಯ ತುಂಬ ಅದರ ವಿಶ್ಲೆಷಣೆ ನಡೆಯುತ್ತದೆ.
                ಕತಕನಹಳ್ಳಿ ಗ್ರಾಮ ದೇವತೆ ಲಗಮವ್ವ ದೇವಿ ದೇವಸ್ಥಾನದ ಕಟ್ಟೆಯಲ್ಲಿ ರಂಗೋಲಿ ಬಿಡಿಸಿದ ಕಂಬಳಿಯ ಮೇಲೆ ನಿಂತು ಗುರುವಿನ ಅಂತಃಕರಣ ನುಡಿಗಳನ್ನು ನುಡಿಯುತ್ತಾರೆ. ಅದಕ್ಕೆ ಕಾಲಜ್ಞಾನ ಮತ್ತು ಕಾರಣಿಕ ನುಡಿಗಳೆಂದು ಕರೆಯುತ್ತಾರೆ. ಪ್ರತಿ ಯುಗಾದಿಯಂದು ಆ ವರ್ಷದ ಮಳೆ ಬೆಳೆ ರಾಜಕೀಯ ಹವಾಮಾನ ವೈಪರೀತ್ಯಗಳ ಬಗ್ಗೆ ಹೇಳುತ್ತಾರೆ.

ನಿಜವಾಗುತ್ತಿದೆ ಈ ಬಾರಿಯ ಚುನಾವಣೆ ಕಾರಣಿಕ. 
               ಸದ್ಯ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಇಡೀ ದೇಶದ ಗಮನ ಸೆಳೆದಿದೆ.
ಈ ಸಂದರ್ಭದಲ್ಲೆ ಶ್ರೀ ಹೇಳಿಕೆ ಪ್ರಚಲಿತದಲ್ಲಿ ಇರುವುದು ವಿಶೇಷ.  ಆಯಾ ಪಕ್ಷದ ನಾಯಕರು ಮಾತೃಪಕ್ಷಕ್ಕೆ ದಿಕ್ಕಾರ ಹೇಳಿ ಇಷ್ಟುದಿನ ವಿರೊದಿಸುತ್ತ ಬಂದಿರುವ ಪಕ್ಷಗಳ ಬಾಗಿಲು ತಟ್ಟಿ ಟಿಕೆಟ್ ಪಡೆದಿದ್ದಾರೆ. ಎಲ್ಲವೂ ಅತಂತ್ರ ಎಂಬಂತೆ ಚುನಾವಣಾ ಪೂರ್ವ ಸಮೀಕ್ಷೆ ತಲೆ ಕೆಳಗಾಗಿವೆ. ಕಳೆದ ಯುಗಾದಿ ಹಬ್ಬದಂದು ಹೇಳಿದ ಹೇಳಿಕೆ ಅಚ್ಚಿಕಡಿಯಿಂದ ಇಚ್ಚಿಕಡಿ ಇಚ್ಚಿಕಡಿಯಿಂದ ಅಚ್ಚಿಕಡಿ ಈ ಸಾಲಾ ಇಲೆಕ್ಷನ್ ಮಸ್ತ ಇರ್ತದ ನೀವೆಂದೂ ಇಂತಾ ಇಲೆಕ್ಷನ್ ನೋಡಿರಂಗಿಲ್ಲಾ ಮುಂದು ನೋಡಲ್ಲ ಹಂಗ ಲಟಿಪಿಟಿ ಕಟಿಪಿಟಿ ಐತಿ ಎಂಬುದು ನಿಜವಾಗುತ್ತಿದೆ. ಧರ್ಮದಿಂದ ಇದ್ದವನಿಗೆ, ಧರ್ಮ ಕಾಪಾಡುವವನಿಗೆ ಸಜ್ಜನನಿಗೆ ಸದ್ಗುರುವಿಗೆ ತಲೆಬಾಗುವವನಿಗೆ ಅನುಮಾನವಿಲ್ದ ಆರಸ್ರಿ. ಹಣ ಹೆಂಡಕ್ಕಾಗಿ ಮತ ಮಾರ್ಕೊಬ್ಯಾಡಿ ಎಂದು ಹೇಳಿದ್ದರು.

    ‌‌‌‌ಮೊದಲೇ ಹೇಳಿದ್ದರು ಕಳೆದಬಾರಿ ಚುನಾವಣೆ ಫಲಿತಾಂಶ. 
          ‌ ಕೈ(ಕಾಂಗ್ರೆಸ್) ತನ್ನ ಕೈಚಳಕ ತೋರಸ್ತೈತಿ, ಕಮಲ(ಬಿಜೆಪಿ)ಕ್ಕ ಅಮಲು, ಹೊರೆಯ(ಜೆಡಿಎಸ್) ಬಾರ ಜಾಸ್ತಿ, ತೆಂಗಿನಕಾಯಿ(ಕೆಜೆಪಿ) ಎಲ್ಲದಕ್ಕೂ ತಾನೆ ಮುಂದು ಅಂತೈತಿ, ಪ್ಯಾನ್(ಬಿ ಎಸ್ ಆರ್ ಕಾಂಗ್ರೆಸ್ ) ಅಲ್ಲಿ ಬೀಸತೈತಿ ಎಂದು ಹೇಳಿದ್ದರು ಅದರಂತೆ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಪಕ್ಷ‌ಅಧಿಕಾರದ ಚುಕ್ಕಾಣಿ ಹಿಡಿಯಿತು. ನೀರಿಗಾಗಿ ಜಗಳ ಬಾಂಬು ಜಗಳ ಚಾಲೂ ಇರ್ತಾವ ಎಂದು ಹೇಳಿದ್ದರು.
ಮೋದಿಜಿಗೆ ನಾಯಕತ್ವ

            ಆಗಿನ್ನೂ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಕಾರಣದತ್ತ ನೋಡಿರಲಿಲ್ಲ 2006ರಲ್ಲಿ ನಡೆದ ಜಾತ್ರೆಯಲ್ಲಿ ಶ್ರೀಗಳು ಮೋದಿಜಿ ಪ್ರದಾನಿ ಆಗುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಚಹಾದ ಹೋಟೆಲದಾಗ ಮೀಟಿಂಗ್ ನಡಿತೇತಿ ಚಹಾ ಮಾರಿದವನ‌ಕೈಯಾಗ ಚುಕ್ಕಾಣಿ ಕೊಟ್ರ ದೇಶ ಉದ್ದಾರ ಆಗ್ತದ ಆಗ ಖಾಕಿ ಖಾದಿ ಖಾವಿಗೆ ಮಹತ್ವ ಸಿಗ್ತದ ದೇಶ ವಿಶ್ವಗುರು ಆಗ್ತದ ಎಂದು ಹೇಳುತ್ತಲೇ ಇದ್ದರು.
ನರೇಂದ್ರ ಮೋದಿಯವರು ಬಾಲಕರಾಗಿದ್ದಾಗ ಚಹಾ ಮಾರುತ್ತಿದ್ದರು. ಆ ಅಂಗಡಿಯಲ್ಲೆ ಹಲವು ಚರ್ಚೆ ಆಗುತ್ತಿದ್ದವು. ಅವರನ್ನ ಪ್ರಧಾನಿ ಅಭ್ಯರ್ಥಿ ಯಾಗಿ ಘೋಷಣೆ ಮಾಡಿದ್ರೆ ಬಹುಮತದ ಸರ್ಕಾರವಾಗುತ್ತದೆ ಅಲ್ಲಿಂದ ಸನಾತನ ಧರ್ಮಕ್ಕೆ ಮರ್ಯಾದೆ ಹೆಚ್ಚಾಗುತ್ತದೆ ಎಂದು ಆರು ವರ್ಷಗಳ ಹಿಂದೆ ಹೇಳಿದ್ದರು. ಅದರಂತೆ 2014ರಲ್ಲಿ ಮೋದಿಜಿ ಪ್ರಧಾನಿ ಯಾಗಿ ಪ್ರಮಾಣವಚಣ ಸ್ವೀಕರಿಸಿದರು.
ಚಾ ಕೀಟಲಿ ಕಾಫೀ ಥರ್ಮಸ್ ದೋಸ್ತಿ ವಿಶ್ವಕ್ಕ ಹಿತ.


        2015ರ ಜಾತ್ರೆಯ ಸಂದರ್ಬದಲ್ಲಿ ಹೇಳಿಕೆ ಇದು ಚಾ ಕಿಟಲಿ ಎಂದರೆ ಭಾರತ ಕಾಫಿ ಥರ್ಮಾಸ್ ಎಂದರೆ ಪಾಶ್ಚಿಮಾತ್ಯ ದೇಶಗಳು . ಒಂದಾದರೆ. ವಿಶ್ವಕ್ಕೆ ಹಿತ ವಿಶ್ವಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ. ಭಾರತ ಇತರೆ ರಾಷ್ಟ್ರಗಳೊಂದಿಗೆ ಹೆಚ್ಚಿನ ಸ್ನೇಹ ಭಾಂದವ್ಯ ವೃದ್ದಿಯಾಗಲಿದೆ ಎಂದು ಹೇಳಿದ್ದರು.
      ಭಾರತದ ಪ್ರಧಾನಿ ಯಾವ ದೇಶಕ್ಕೆ ಹೋದರೂ ಅಲ್ಲಿ ಭವ್ಯ ಸ್ವಾಗತ ಸಿಗುತ್ತದೆ ಇತರೆ ರಾಷ್ಟ್ರಗಳು ನಮನ ದೇಶದ ಸ್ನೇನ ಬೆಳೆಸಲು ತುದಿಗಾಲಲ್ಲಿ ನಿಂತಿರುವುದು ಸುಳ್ಳಲ್ಲ. ಇಡೀ ಜಗತ್ತು ಭಾರತಕ್ಕೆ ವಿಶ್ವಗುರುವಿನ ಸ್ಥಾನ ನೀಡುವ ಕಾಲ ಸಮೀಪದಲ್ಲಿದೆ.

               ಶ್ರೀಗಳು ಹವಾಮಾನ ವೈಪರಿತ್ಯ ಬೆಳೆಗಳ ಬಗ್ಗೆ ಮಾಹಿತಿ ಮಳೆ ಮತ್ತು ಉತ್ತಮ ಸಂದೇಶಗಳನ್ನು ತಮ್ಮ ಹೇಳಿಕೆ ಮೂಲಕ ನೀಡಿ ಭಕ್ತರನ್ನು ಸದಾ ಎಚ್ಚರಿಸುತ್ತಿರುತ್ತಾರೆ.
ಜನರ ಉದ್ದಾರಕ್ಕಾಗಿಯೇ ಸದಾಶಿವ ಚಕ್ರವರ್ತಿಗಳು ಚಂದ್ರಮ್ಮದೇವಿ ಮತ್ತು ಶಿವಯ್ಯ ಸ್ವಾಮಿಗಳು ಕತಕನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದಾರೆ.
ವಿಜಯಪುರದಿಂದ ಪೂರ್ವಕ್ಕೆ 25ಕಿಮೀ ಅಂತರದಲ್ಲಿ ಕತಕನಹಳ್ಳಿ ಗ್ರಾಮವಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ

ಗುಡ್ಡಾಪುರ ಶ್ರೀ ದಾನಮ್ಮ ದೇವಿ